Bengaluru 23°C
Ad

ಉಡುಪಿ: ಶೌಚಾಲಯದಲ್ಲಿ ಕುಸಿದು ಬಿದ್ದು ನಿವೃತ್ತ ಶಿಕ್ಷಕಿ ಮೃತ್ಯು

Teacher

ಉಡುಪಿ: ನಿವೃತ್ತ ಶಿಕ್ಷಕಿರೊಬ್ಬರು ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಿಟ್ಟೂರಿನಲ್ಲಿ ಗುರುವಾರ ನಡೆದಿದೆ.

ಹಿರಿಯ ವಕೀಲ ದಿವಂಗತ ವಿಲಿಯಂ ಪಿಂಟೋ ಅವರ ಪತ್ನಿ ರೋಸಿ ವಿಲಿಯಂ ಪಿಂಟೋ(72) ಮೃತ ಶಿಕ್ಷಕಿ. ನಿಟ್ಟೂರು ಶಾಲೆಯ ನಿವೃತ್ತ ಶಿಕ್ಷಕಿಯಾಗಿರುವ ಇವರು, ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ಮಕ್ಕಳು ಕರೆ ಮಾಡಿದಾಗ ಕರೆ ಎತ್ತದೇ ಇದ್ದರಿಂದ ಮನೆಗೆ ಬಂದು ನೋಡುವಾಗ ರೋಸಿ ಪಿಂಟೋ ಅವರು ಬಾತ್‌ರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ.
ಸ್ಥಳಕ್ಕೆ ನಗರ ಠಾಣಾ ಅಧಿಕಾರಿ ಪುನೀತ್ ಕುಮಾರ್ ಬಿ.ಈ., ಎಎಸ್ಸೈ ನವೀನ್ ದೇವಾಡಿಗ ಭೇಟಿ ನೀಡಿ ಪರಿಶೀಲಿಸಿದರು.

Ad
Ad
Nk Channel Final 21 09 2023