ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಮರದ ದಿಮ್ಮಿ ತಾಗಿ ಬೋಟ್‌ಗೆ ಹಾನಿಯಾಗಿ ದಿಕ್ಕಾಪಾಲಾಗುತ್ತಿದ್ದ ತ್ರಿಸೆವೆಂಟಿ ಬೋಟೊಂದನ್ನು ಮೀನುಗಾರಿಕೆಯಲ್ಲಿ ತೊಡಗಿದ್ದ ಇನ್ನೆರಡು ಬೋಟ್‌ನವರು ರಕ್ಷಿಸಿದ್ದಾರೆ. ಅದರಲ್ಲಿದ್ದ 6 ಮೀನುಗಾರರನ್ನು ಸುರಕ್ಷಿತವಾಗಿ ಪಾರು ಮಾಡಿದ ಘಟನೆ ಕೋಟ ಸಮೀಪ ಆಳ ಸಮುದ್ರದಲ್ಲಿ ನಡೆದಿದೆ.
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಈ ಬೋಟ್‌ನಲ್ಲಿದ್ದ ಬಸವ ಖಾರ್ವಿ, ಪ್ರಮೋದ್, ಭಾಸ್ಕರ್, ವೈಕುಂಠ, ಶೇಖರ್ ಹಾಗೂ ಸೂರ್ಯ ಅವರನ್ನು ರಕ್ಷಿಸಲಾಗಿದೆ. ಕೋಟ ಸಮೀಪದ ಅರಬಿ ಸಮುದ್ರದಲ್ಲಿ ಮರದ ಬೃಹತ್ ದಿಮ್ಮಿ ತಾಗಿ, ಬೋಟಿಗೆ ಹಾನಿಯಾಗಿದ್ದು, ಈ ವೇಳೆ ಅಲ್ಲಿಯೇ ಇದ್ದ ವರುಣ ಸಿದ್ಧಿ ಹಾಗೂ ಬೃಂದಾವನ ಎನ್ನುವ ಬೋಟ್‌ನಲ್ಲಿದ್ದ ಮೀನುಗಾರರು ನೆರವಿಗೆ ಬಂದು, ಈ ಬೋಟ್ ಅನ್ನು ಹಂಗಾರಕಟ್ಟೆಯ ಬಂದರಿಗೆ ಸುರಕ್ಷಿತವಾಗಿ ತರುವಲ್ಲಿ ಸಹಕರಿಸಿದರು. ಬೋಟ್‌ಗೆ ಭಾರೀ ಹಾನಿಯಾಗಿದ್ದು, ಅಂದಾಜು 25 ಲಕ್ಷ ರೂ. ನಷ್ಟ ಉಂಟಾಗಿದೆ. ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad