ಉಡುಪಿ: ಕಾರ್ಕಳ ತಾಲೂಕಿನ ನಿಟ್ಟೆ ಸಮೀಪ ಚಿರತೆಯ ಮರಿಯೊಂದು ಕಾಣಿಸಿಕೊಂಡಿದೆ. ಇಲ್ಲಿನ ಕಲ್ಯ ಗ್ರಾಮದ ಗುಳಿಗ ದೈವದ ಗುಡಿಯ ಸಮೀಪ ಚಿರತೆಯ ಮರಿ ಅವಿತು ಕುಳಿತಿತ್ತು.
Ad
ತಾಯಿಯಿಂದ ಬೇರ್ಪಟ್ಟು ಅಸಹಾಯಕವಾಗಿದ್ದ ಈ ಪುಟ್ಟ ಮರಿಯನ್ನು ಮೊದಲು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಪುಟ್ಟ ಚರಿತ್ರೆ ಮರಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
Ad
Ad