Bengaluru 16°C

ಉಡುಪಿ: ಯಕ್ಷಗಾನ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು; ಯಕ್ಷಗಾನ ರದ್ದು

ಉಡುಪಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಯಕ್ಷಗಾನ ಮೇಳಗಳಿಗೂ ಸಮಸ್ಯೆ ಎದುರಾಗಿದೆ. ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೆ ಮಳೆ ನೀರು ನುಗ್ಗಿದೆ.

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಯಕ್ಷಗಾನ ಮೇಳಗಳಿಗೂ ಸಮಸ್ಯೆ ಎದುರಾಗಿದೆ. ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೆ ಮಳೆ ನೀರು ನುಗ್ಗಿದೆ.


ವೇಷಧಾರಿಗಳು ಬಣ್ಣ ಹಾಕುವ ಚೌಕಿ ಮನೆಯ ತುಂಬೆಲ್ಲ ನೀರು ತುಂಬಿದೆ. ಇದರಿಂದ ಸೋಮವಾರ ರಾತ್ರಿಯ ಬಹುತೇಕ ಯಕ್ಷಗಾನಗಳು ರದ್ದಾಗಿವೆ. ಚೌಕಿ ಮನೆಯ ಒಳಗೆ ಧಾರಾಕಾರ ಮಳೆ ನೀರು ಹರಿದು ಹೋಗುತ್ತಿದೆ.


ಮಳೆಗಾಲ ಮುಗಿದ ನಂತರವೇ ಯಕ್ಷಗಾನ ಆರಂಭವಾಗುವುದು ಪ್ರತೀತಿ. ಆದರೆ, ಈ ಬಾರಿ ಡಿಸೆಂಬರ್ ತಿಂಗಳಲ್ಲೂ ಮಳೆ ಸುರಿಯುತ್ತಿದೆ. ಇದರಿಂದ ಪ್ರದರ್ಶನಗಳು ರದ್ದಾದ ಕಾರಣ ಕಲಾವಿದರಿಗೆ ಪ್ರೇಕ್ಷಕರಿಗೆ ಬೇಸರವಾಗಿದೆ.


Nk Channel Final 21 09 2023