Bengaluru 27°C

ಉಡುಪಿ: ‘ಶ್ರೀರಾಮಾಶ್ವಮೇದಂ’, ‘ನಂದಳಿಕೆ ಐಸಿರಿ ದರ್ಶನ’ ಕೃತಿಗಳ ಲೋಕಾರ್ಪಣೆ

ಮುದ್ದಣ 155ನೇ ಜನ್ಮದಿನ ಸಂಭ್ರಮದ ಪ್ರಯುಕ್ತ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಹಾಗೂ ಉಡುಪಿ ಮುದ್ದಣ ಪ್ರಕಾಶನ, ನಂದಳಿಕೆ

ಉಡುಪಿ: ಮುದ್ದಣ 155ನೇ ಜನ್ಮದಿನ ಸಂಭ್ರಮದ ಪ್ರಯುಕ್ತ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಹಾಗೂ ಉಡುಪಿ ಮುದ್ದಣ ಪ್ರಕಾಶನ, ನಂದಳಿಕೆ ಇವರ ಜಂಟಿ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ‘ಶ್ರೀರಾಮಾಶ್ವಮೇದಂ’ ಮತ್ತು ‘ನಂದಳಿಕೆ ಐಸಿರಿ ದರ್ಶನ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.


ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಅವರು, ವಿದ್ವತ್ ಎನ್ನುವುದು ಕರಾವಳಿ ಪ್ರದೇಶದ ದೊಡ್ಡ ಶಕ್ತಿ. ದೊಡ್ಡ ದೊಡ್ಡ ವಿದ್ವಾಂಸರ ಪಾಂಡಿತ್ಯದಿಂದಾಗಿ ಅಭಿಜಿತ ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದ ಉಳಿದ ಭಾಗಗಳಿಗಿಂತ ಹೆಚ್ಚು ವಿಶಿಷ್ಟತೆ, ಅನನ್ಯತೆಯಿಂದ ಕೂಡಿದೆ. ಪ್ರಾಚೀನ ಕಾಲದ ಅಧ್ಯಯನ, ಸಂಪಾದನೆ ಹೀಗೆ ಈ ಜಿಲ್ಲೆಗೆ ದೊಡ್ಡ ಪರಂಪರೆ ಇದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಯುವ ಪೀಳಿಗೆಯ ಕರ್ತವ್ಯ ಆಗಿದೆ ಎಂದರು.


ಬಹುಭಾಷಾ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಹಿರಿಯ ಅನುವಾದಕ, ಲೇಖಕ ಡಾ. ಎನ್.ಟಿ. ಭಟ್, ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಂದಳಿಕೆ ಬಾಲಚಂದ್ರ ರಾವ್, ದುಗ್ಗಣ್ಣ ಸಾವಂತ್, ಜಯಲಕ್ಷ್ಮೀ ಉಪಸ್ಥಿತರಿದ್ದರು. ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು.


Nk Channel Final 21 09 2023