ಉಡುಪಿ: ಕಾಂತಾರ ಫ್ರೀಕ್ವೆಲ್ ನಲ್ಲಿ ಭಾಗಿಯಾಗಿದ್ದ ಚಿತ್ರದ ಜ್ಯೂನಿಯರ್ ಕಲಾವಿದರು ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರು , ಕೇರಳದಿಂದ ಜ್ಯೂನಿಯರ್ ಕಲಾವಿದರನ್ನು ಕರೆಸಿದ್ದಾರೆ. ನಮಗೆ ಸರಿಯಾದ ಸಮಯಕ್ಕೆ ಸಂಭಾವನೆ ನೀಡುತ್ತಿಲ್ಲ.
Ad
ಮಹಿಳಾ ಕಲಾವಿದರಿಗೂ ಪೇಮೆಂಟ್ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಸರಿಯಾಗಿ ಊಟವು ಕೊಡುತ್ತಿಲ್ಲ. ಚಿತ್ರಿಕರಣ ಇದೆ ಎಂದು ಕರೆಸಿ ವಾಪಸ್ಸು ಕಳುಹಿಸುತ್ತಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗುತ್ತಿದೆ ಎಂದು ಜ್ಯೂನಿಯರ್ ಆರ್ಟಿಸ್ಟ್ ಒಬ್ಬ ವಿಡಿಯೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Ad
Ad