Bengaluru 21°C
Ad

ನ.6ರಂದು ರಾಜ್ಯ ಸರ್ಕಾರದ ಧೋರಣೆ ಖಂಡಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

ರೈತರ ಜಮೀನುಗಳನ್ನು ವಕ್ಫ ಬೋರ್ಡ್​ ಹೆಸರಿಗೆ ನಮೂದಿಸಿದ ರಾಜ್ಯ ಸರ್ಕಾರದ ಧೋರಣೆ ಖಂಡಸಿ ಜಿಲ್ಲಾ ಬಿಜೆಪಿ ವತಿಯಿಂದ ನ.6ರಂದು ಬೆಳಿಗ್ಗೆ 10ಗಂಟೆಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ತಿಳಿಸಿದರು.

ಉಡುಪಿ: ರೈತರ ಜಮೀನುಗಳನ್ನು ವಕ್ಫ ಬೋರ್ಡ್​ ಹೆಸರಿಗೆ ನಮೂದಿಸಿದ ರಾಜ್ಯ ಸರ್ಕಾರದ ಧೋರಣೆ ಖಂಡಸಿ ಜಿಲ್ಲಾ ಬಿಜೆಪಿ ವತಿಯಿಂದ ನ.6ರಂದು ಬೆಳಿಗ್ಗೆ 10ಗಂಟೆಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ತಿಳಿಸಿದರು.

Ad

ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲದ ಕಾಯಿನ್​ ಸರ್ಕಲ್​ನಿಂದ ಸಾವಿರಾರು ಮಂದಿ ಡಿಸಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಲಿದ್ದಾರೆ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲಿದ್ದಾರೆ ಎಂದರು.

Ad

ವಕ್ಫ್ ಅನಾಹುತಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಕೇಂದ್ರ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನ.4ರಂದು ಬೆಳಗ್ಗೆ 12ಗಂಟೆಗೆ ಕಾರ್ಕಳ ತಾಲೂಕು ಕಚೇರಿ, 4ಗಂಟೆಗೆ ಹೆಬ್ರಿ ತಾಲೂಕು ಕಚೇರಿ, ನ.5ರಂದು 3 ಗಂಟೆಗೆ ಕುಂದಾಪುರ ತಾಲೂಕು ಕಚೇರಿ, ನ.6ರಂದು 3 ಗಂಟೆಗೆ ಕಾಪು ಮತ್ತು ಬೈಂದೂರು ತಾಲೂಕು ಕಚೇರಿಗೆ ಸಾವಿರಾರು ಮಂದಿ ತೆರಳಿ ಪಹಣಿ ಪರಿಶೀಲನೆ ನಡೆಸಲಿದ್ದಾರೆ. ನ.7 ಮತ್ತು 8ರಂದು ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ ನಡೆಯಲಿದೆ ಎಂದರು.

Ad

ಬಿಜೆಪಿ ರಾಜಕೀಯಕ್ಕೆ ಹೋರಾಟ ನಡೆಸುತ್ತಿಲ್ಲ. ಬದಲಾಗಿ ಜನರಿಗೆ ಆದ ಅನ್ಯಾಯವನ್ನು ಪ್ರಶ್ನಿಸುತ್ತಿದೆ. ವಕ್ಫ್ ಬೋರ್ಡ್​ ಪಹಣಿ ಬದಲಾವಣೆ ಮಾಡಿ ಜನರಿಂದ ಹೇಗೆ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಗಮನಿಸಿ ಮುಂದಿನ ಹಂತಕ್ಕೆ ಕೈಹಾಕುವ ದುರಾಲೋಚನೆ ಮುಖ್ಯಮಂತ್ರಿಗಳಾಗಿದ್ದು, ಈಗ ಆದೇಶ ವಾಪಾಸು ಪಡೆದಿರುವ ಹಿಂದೆ ಬೇರೆ ಷಡ್ಯಂತ್ರ ಅಡಗಿದೆ.

Ad

ಯಾವುದೇ ತಪ್ಪುಗಳನ್ನು ಬೊಟ್ಟು ಮಾಡಿದರೂ ಬಿಜೆಪಿ ಮೇಲೆ ಆರೋಪ ಹೊರಿಸುವುದು ಕಾಂಗ್ರೆಸ್​ನ ಗೀಳು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ರೈತರ ಪಹಣಿ ತಿದ್ದುಪಡಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಶ್ಮ ಉದಯ್​ ಶೆಟ್ಟಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023