ಉಡುಪಿ: ಬೀದಿನಾಯಿಯ ದಾಳಿಯಿಂದ ಕಾಲುಮುರಿತಗೊಂಡು ಹಾರಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಹೆಣ್ಣು ನವಿಲನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿದ್ದಾರೆ.
ಕೆಸರಿನಲ್ಲಿ ನವಿಲು ಬಿದ್ದು ಒದ್ದಾಡುವುದನ್ನು ಗಮನಿಸಿದ ಸ್ಥಳೀಯರು ಸಮಾಜಸೇವಕ ಒಳಕಾಡು ಅವರಿಗೆ ತಿಳಿಸಿದ್ದರು. ತಕ್ಷಣ ಅವರು ನವಿಲನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಒಪ್ಪಿಸಿದರು. ಇಲಾಖೆಯವರು ನವಿಲನ್ನು ಚಿಕಿತ್ಸೆಗೆ ಒಳಪಡಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಗುರುರಾಜ್ ಕಾವ್ರಾಡಿ, ಅರಣ್ಯ ಗಸ್ತು ಪಾಲಕ ಕೇಶವ ಪೂಜಾರಿ ಇದ್ದರು. ಪ್ರದೀಪ್ ಅಜ್ಜರಕಾಡು ಕಾರ್ಯಚರಣೆಗೆ ಸಹಕರಿಸಿದರು