Ad

ಆನ್ ಲೈನ್ ಟ್ರೇಡಿಂಗ್ ನಲ್ಲಿ‌ 3.60 ಕೋಟಿ ರೂ. ವಂಚನೆ

ಆನ್ ಲೈನ್ ಟ್ರೇಡಿಂಗ್ ನಲ್ಲಿ‌ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಮೂರು ಮಂದಿಗೆ ಕೋಟ್ಯಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ: ಆನ್ ಲೈನ್ ಟ್ರೇಡಿಂಗ್ ನಲ್ಲಿ‌ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಮೂರು ಮಂದಿಗೆ ಕೋಟ್ಯಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಿನೆಟ್‌ ಸೋಫಿಯಾ ಡಿʼಮೆಲ್ಲೋ ಮತ್ತು ಅವರ ಗಂಡ ಹಾಗೂ ಗಂಡನ ಸೋದರ ಸಂಬಂಧಿಗೆ ವಿದ್ಯಾ ಸೋಮೇಶ್ವರ್‌ ಎಂಬಾತ ತಾನು ಕೆಲಸ ಮಾಡಿಕೊಂಡಿರುವ SP Capitals Trading ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿದ್ದನು. ಅದರಂತೆ ಇವರು 19/09/2019 ರಿಂದ ದಿನಾಂಕ 29/08/2024 ರ ತನಕ ಹಂತ ಹಂತವಾಗಿ ಒಟ್ಟು ರೂಪಾಯಿ 3,60,67,000/- ಹಣವನ್ನು ವಂಚಕಿಯ ಖಾತೆಗೆ ಜಮೆ ಮಾಡಿದ್ದಾರೆ. ಈವರೆಗೆ ಹೂಡಿಕೆ ಮಾಡಿದ ಹಣವನ್ನು ಹಾಗೂ ಲಾಭಾಂಶವನ್ನು ವಾಪಾಸ್ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ‌.

Ad
Ad
Nk Channel Final 21 09 2023