Bengaluru 22°C
Ad

ಕಾರ್ಕಳ: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

ಇಲ್ಲಿನ ನಿಟ್ಟೆ ಗ್ರಾಮದ ಅರಂತಬೆಟ್ಟು ದರ್ಕಾಸ್ ಬಳಿಯ ಮನೆಯೊಂದರ ಬಾವಿಗೆ ಆಹಾರ ಅರಸಿಕೊಂಡು ಬಂದಿದ್ದ ಚಿರತೆ ಮರಿ ಬಿದ್ದಿದ್ದು, ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.

ಉಡುಪಿ: ಇಲ್ಲಿನ ನಿಟ್ಟೆ ಗ್ರಾಮದ ಅರಂತಬೆಟ್ಟು ದರ್ಕಾಸ್ ಬಳಿಯ ಮನೆಯೊಂದರ ಬಾವಿಗೆ ಆಹಾರ ಅರಸಿಕೊಂಡು ಬಂದಿದ್ದ ಚಿರತೆ ಮರಿ ಬಿದ್ದಿದ್ದು, ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.

Ad

ರಾತ್ರಿ ಮನೆಯ ಬಳಿ ಕೋಳಿ ಇರುವುದನ್ನು ಗಮನಿಸಿದ್ದ ಚಿರತೆ ಅದನ್ನು ಹಿಡಿದು ತಿನ್ನಲು ಓಡುವ ಭರದಲ್ಲಿ ತೆರೆದ ಬಾವಿಗೆ ಬಿದ್ದಿದೆ. ಮುಂಜಾನೆ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬೋನು ಮತ್ತು ಬಲೆಯನ್ನು ಇರಿಸಿ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.

Ad

ಚ (2)

ಒಂದು ವರ್ಷದ ಮರಿ ಚಿರತೆ ಇದಾಗಿದ್ದು, ತಾಲೂಕು ಪಶುವೈದ್ಯಾಧಿಕಾರಿ ವಾಸುದೇವ್ ಅವರು ಚಿರತೆಯ ಆರೋಗ್ಯ ತಪಾಸಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ‌ ಎಸಿಎಫ್ ಪಿ. ಶ್ರೀಧರ್, ಆರ್ ಎಫ್ ಒ‌ ಪ್ರಭಾಕರ್ ಕುಲಾಲ್, ಡಿಆರ್ ಎಫ್ ಒ ಹುಕ್ರಪ್ಪ ಗೌಡ, ಸಿಬಂದಿ, ಸ್ಥಳೀಯರು ಭಾಗವಹಿಸಿದ್ದರು.

Ad
Ad
Ad
Nk Channel Final 21 09 2023