Bengaluru 21°C
Ad

ನ.16, 17ರಂದು ರಾಜಾಂಗಣದಲ್ಲಿ ನೃತ್ಯೋತ್ಸವ-2024 ಕಾರ್ಯಕ್ರಮ

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿ ಇದರ ಜಂಟಿ ಆಶ್ರಯದಲ್ಲಿ "ನೃತ್ಯೋತ್ಸವ-2024" ಕಾರ್ಯಕ್ರಮವನ್ನು ಇದೇ ನ.16 ಮತ್ತು 17ರಂದು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೃಷ್ಟಿ ನೃತ್ಯ ಕಲಾ ಕುಟೀರದ ಮುಖ್ಯಸ್ಥೆ ಮಂಜರಿ ಚಂದ್ರ ತಿಳಿಸಿದರು.

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿ ಇದರ ಜಂಟಿ ಆಶ್ರಯದಲ್ಲಿ “ನೃತ್ಯೋತ್ಸವ-2024” ಕಾರ್ಯಕ್ರಮವನ್ನು ಇದೇ ನ.16 ಮತ್ತು 17ರಂದು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೃಷ್ಟಿ ನೃತ್ಯ ಕಲಾ ಕುಟೀರದ ಮುಖ್ಯಸ್ಥೆ ಮಂಜರಿ ಚಂದ್ರ ತಿಳಿಸಿದರು.

Ad

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಿಗ್ಗೆ 8ಗಂಟೆಗೆ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ ನಡೆಯಲಿದ್ದು, ನಿವೃತ್ತ ಪ್ರಾಂಶುಪಾಲ ಎಂ.ಎಲ್. ಸಾಮಗ ಉದ್ಘಾಟಿಸಲಿದ್ದಾರೆ. ಆ ಬಳಿಕ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಹಾಗೂ ಓಪನ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಮಂಜುನಾಥ್ ಪುತ್ತೂರು ತಾಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ ಎಂದರು.

Ad

ಮಧ್ಯಾಹ್ನ 2ಗಂಟೆಗೆ ರಾಷ್ಟ್ರಮಟ್ಟದ ಸಮೂಹ ಭರತನಾಟ್ಯ ಸ್ಪರ್ಧೆ ನಡೆಯಲಿದ್ದು, ಸಂಜೆ 4 ಗಂಟೆಗೆ ಸ್ಪರ್ಧೆಯ ಬಹುಮಾನ ವಿತರಣೆ ನಡೆಸಲಾಗುವುದು. ಸಂಜೆ 7ರಿಂದ ಸೃಷ್ಟಿ ನೃತ್ಯ ಕಲಾಕುಟೀರದ ಕಿರಿಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು. ನ. 17ರಂದು ಬೆಳಿಗ್ಗೆ 9.30ಕ್ಕೆ ಶುಭಾ ಮಣಿ ಚಂದ್ರಶೇಖ‌ರ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

Ad

ಬೆಳಿಗ್ಗೆ 10.25ಕ್ಕೆ ಕೇರಳದ ನೃತ್ಯಪಟು ಆನಂದ್ ಸಿ.ಎಸ್. ಇವರಿಂದ ಭರತನಾಟ್ಯ ಪ್ರದರ್ಶನ, 11.20ಕ್ಕೆ ನವ್ಯಶ್ರೀ ಹಾಗೂ ಶ್ರೀಮ ಉಪಾಧ್ಯಾಯ ಅವರು ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ಮಧ್ಯಾಹ್ನ 1.30 ಕ್ಕೆ ಮೃದುಲಾ ರೈ ಅವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 2.30ಕ್ಕೆ ವಿ. ರಾಧಿಕಾ ಶೆಟ್ಟಿ ಅವರ ಸಾರಥ್ಯದಲ್ಲಿ ‘ನೃತ್ಯ ದಾಸೋಹಂ’ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಸಮಾರೋಪ ಸಮಾರಂಭವು ನಡೆಯಲಿದೆ ಎಂದರು

Ad
Ad
Ad
Nk Channel Final 21 09 2023