Bengaluru 30°C

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆಗೆ ಶಾಸಕ ಯಶ್ ಪಾಲ್ ಸುವರ್ಣ ತಿರುಗೇಟು

ಕುಂಭಮೇಳದಲ್ಲಿ ಸ್ನಾನ ಮಾಡಿದ್ರೆ ದೇಶದ ಬಡತನ ನೀಗುವುದಿಲ್ಲ. ಮೋದಿ ಅಮಿತ್ ಶಾ ನೂರು ಜನ್ಮ ಎತ್ತಿದ್ರೂ ಸ್ವರ್ಗಕ್ಕೆ ಹೋಗಲ್ಲ ನರಕಕ್ಕೆ ಹೋಗ್ತಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆಗೆ ಉಡುಪಿಯಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.

ಉಡುಪಿ: ಕುಂಭಮೇಳದಲ್ಲಿ ಸ್ನಾನ ಮಾಡಿದ್ರೆ ದೇಶದ ಬಡತನ ನೀಗುವುದಿಲ್ಲ. ಮೋದಿ ಅಮಿತ್ ಶಾ ನೂರು ಜನ್ಮ ಎತ್ತಿದ್ರೂ ಸ್ವರ್ಗಕ್ಕೆ ಹೋಗಲ್ಲ ನರಕಕ್ಕೆ ಹೋಗ್ತಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆಗೆ ಉಡುಪಿಯಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.


ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಜಾವಾಬ್ದಾರಿಯುತ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದ ರಾಷ್ಟ್ರದ ದೊಡ್ಡ ನಾಯಕನಿಗೆ ಇದು ಶೋಭೆ ತರಲ್ಲ. ಇದು ಖರ್ಗೆಯ ಪ್ರಾಯದೋಷ ಹೇಳಿಕೆಯೋ ಕಾಂಗ್ರೆಸ್‌ ಪ್ರೇರಿತ ಹೇಳಿಕೆಯೋ ಗೊತ್ತಾಗುತ್ತಿಲ್ಲ. ಭಾರತದ ಪ್ರಪಂಚದ ಬಹಳಷ್ಟು ಜನ ಮಹಾಕುಂಭಮೇಳದಲ್ಲಿ ಭಾಗಿಯಾಗಬೇಕು ಎಂಬ ಹಂಬಲದಲ್ಲಿದ್ದಾರೆ.


ಖರ್ಗೇ ವಿಶ್ವದ ಜನ ತಲೆತಗ್ಗಿಸುವಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ. ಪ್ರಾಯ ದೋಷದ ಹೇಳಿಕೆಯಾಗಿದ್ದರೆ ಕಾಂಗ್ರೆಸ್ ನ ಇತರೆ ನಾಯಕರು ಸ್ಪಷ್ಟನೆ ಕೊಡಬೇಕು. ಖರ್ಗೆ ಅವರೇ ನೀವು ಹಿರಿಯರು, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ. ದೇಶದ ಜನ ಇದನ್ನು ಸಹಿಸುವುದಿಲ್ಲ ಸಾರ್ವಜನಿಕವಾಗಿ ನೀವು ಕ್ಷಮೆ ಕೋರಬೇಕು.


ಹಿಂದೂ ಧರ್ಮ ಏನು ಎಂದು ಗೊತ್ತಿಲ್ಲದವರು ಸ್ವರ್ಗ ನರಕದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದ ಆಚಾರ ವಿಚಾರ ಗೊತ್ತಿಲ್ಲದೆ ಸ್ವರ್ಗದ ವಿಚಾರ ಮಾತನಾಡುವ ನೈತಿಕತೆ ನಿಮಗಿಲ್ಲ. ಅಲ್ಪಸಂಖ್ಯಾತರ ಓಲೈಕೆಗೆ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ವಿಶ್ವದ ಜನ ಪ್ರಧಾನಿ ಮೋದಿಯನ್ನು ಒಪ್ಪಿದ್ದಾರೆ.


ಮೋದಿ ಅಮಿತ್ ಶಾ ಏಳಿಗೆ ಮತ್ತು ನಾಯಕತ್ವವನ್ನು ಒಪ್ಪದವರು ಇಂತಹ ಹೇಳಿಕೆ ಕೊಡುತ್ತಾರೆ ಇದು ಖಂಡನೀಯ. ಮೋದಿ ಅಮಿತ್ ಶಾ ನಾಯಕರು ಮುಂದೆ ದೇಶಕ್ಕೆ ಲಭಿಸುವುದು ಕಷ್ಟಸಾಧ್ಯ. ಮೋದಿಯ ಆಡಳಿತ ದೂರದರ್ಶತ್ವ ದೇಶಕ್ಕೆ ಅಗತ್ಯ ಇದೆ ಎಂದರು.


Nk Channel Final 21 09 2023