Bengaluru 22°C
Ad

ಶ್ರೀ ಕೃಷ್ಣಮಠದಲ್ಲಿ ವಿಜಯದಾಸರ ಆರಾಧನೆ; ಮೇಘಾಲಯದ ರಾಜ್ಯಪಾಲ ವಿಜಯಶಂಕರ್ ಭಾಗಿ

ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ ಆರಾಧನೆ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಎಚ್ ಸಿ ವಿಜಯಶಂಕರ್ ಭಾಗವಹಿಸಿದರು.

ಉಡುಪಿ: ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ ಆರಾಧನೆ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಎಚ್ ಸಿ ವಿಜಯಶಂಕರ್ ಭಾಗವಹಿಸಿದರು.

Ad

ಶ್ರೀಕೃಷ್ಣ ದೇವರ ದರ್ಶನ ಮಾಡಿದ ರಾಜ್ಯಪಾಲರು, ಗೀತಾಮಂದಿರದಲ್ಲಿ ಪರ್ಯಾಯ ಶ್ರೀಪಾದರ ಅನುಗ್ರಹ ಪ್ರಸಾದವನ್ನು ಪಡೆದರು. ಶ್ರೀಪಾದರ ಜಾಗತಿಕ ಮಟ್ಟದ ಧಾರ್ಮಿಕ ಆಂದೋಲನ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆಯನ್ನೂ ಪಡೆದರು.

Ad

ಮ (2)

ಕರ್ನಾಟಕದ ಹರಿದಾಸರ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ರಾಜ್ಯಪಾಲರು ಉಡುಪಿಯ ಪ್ರಸಿದ್ಧ ಕನಕನ ಗಿಂಡಿಯ ಮೂಲಕ ಶ್ರೀಕೃಷ್ಣ ದರ್ಶನವನ್ನು ಪಡೆದು ಭಕ್ತ ಕನಕದಾಸರವಿಗ್ರಹಕ್ಕೆ ನಮಿಸಿದರು.

Ad

ಶ್ರೀವಿಜಯದಾಸರ ಆರಾಧನೆ ಪ್ರಯುಕ್ತ ನಡೆಯುತ್ತಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲೂ ಪಾಲ್ಗೊಂಡರು. ಉಡುಪಿಯ ದೈವಿಕ ಸ್ಪಂದನದಿಂದ ವಿಶೇಷ ಸಂತೋಷಗೊಂಡು ಉಡುಪಿಯ ಶ್ರೀಕೃಷ್ಣನ ಮಹತ್ವವನ್ನು ಶ್ರೀಪಾದರ ಅನುಗ್ರಹಕ್ಕೆ ಪಾತ್ರರಾದರು.

Ad
Ad
Ad
Nk Channel Final 21 09 2023