Bengaluru 27°C
Ad

ಉಡುಪಿ: ನ.16, 17ರಂದು ‘ಬೃಹತ್ ಉದ್ಯೋಗ ಮೇಳ’

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳನಗರ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಎಂಆರ್ ಜಿ ಗ್ರೂಪ್ ನ ಪ್ರಾಯೋಜಕತ್ವದಲ್ಲಿ ಸತತ 3ನೇ ಬಾರಿಗೆ ಎರಡು ದಿನಗಳ 'ಬೃಹತ್ ಉದ್ಯೋಗ ಮೇಳ'

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳನಗರ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಎಂಆರ್ ಜಿ ಗ್ರೂಪ್ ನ ಪ್ರಾಯೋಜಕತ್ವದಲ್ಲಿ ಸತತ 3ನೇ ಬಾರಿಗೆ ಎರಡು ದಿನಗಳ ‘ಬೃಹತ್ ಉದ್ಯೋಗ ಮೇಳ’ ವನ್ನು ಇದೇ ನವೆಂಬರ್ 16 ಮತ್ತು 17ರಂದು ಮಣಿಪುರ ಗ್ರಾಮದ ಕುಂತಳನಗರದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ತಿಳಿಸಿದರು.

Ad

ಕಾಪು ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಿಗ್ಗೆ 9ಗಂಟೆಯಿಂದ ಅಭ್ಯರ್ಥಿಗಳ ರಿಜಿಸ್ಟ್ರೇಷನ್ ಆರಂಭಗೊಳ್ಳಲಿದೆ. ಬೆಳಿಗ್ಗೆ 9.45ಕ್ಕೆ ಎಂಆರ್ ಜಿ ಗ್ರೂಪ್ ನ ಛೇರ್ಮನ್ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ನ. 17ರಂದು ಬೆಳಿಗ್ಗೆ 11.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

Ad

IT, ಮೆಕ್ಯಾನಿಕಲ್, ಎಲೆಕ್ನಿಕಲ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಮತ್ತು ಇನ್ನಿತರ ಬ್ರಾಂಚ್ ನಲ್ಲಿ ಇಂಜಿನಿಯರಿಂಗ್, ಡಿಪ್ಲೊಮೊ ಮತ್ತು ITI ಮಾಡಿದ ಮತ್ತು ಅಂತಿಮ ವರ್ಷದಲ್ಲಿ ಕಲಿಯುತಿರುವ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ರಿಜಿಸ್ಟಾರ್ ಮಾಡಿದ ಕಂಪನಿಗಳ ಪ್ರಕಾರ ಇಂಜಿನಿಯರಿಂಗ್ ಫೀಲ್ಡ್ ಸುಮಾರು 1000 ಹುದ್ದೆಗಳಿವೆ.

Ad

ಅಲ್ಲದೆ, ಬಿ.ಎ, ಬಿ. ಕಾಮ್, ಬಿ.ಎಸ್ಸಿ, ಬಿ. ಬಿಎಂ, ಬಿ.ಸಿ.ಎ ಮತ್ತು ಇನ್ನಿತರ ಡಿಗ್ರಿ ಮಾಡಿದವರಿಗೆ ಮತ್ತು ಎಂ. ಸಿ. ಎ, ಎಂ.ಬಿ.ಎ, ಎಂ. ಎಸ್ಸಿ, ಮಾಡಿದ ಅಭ್ಯರ್ಥಿಗಳಿಗೆ ಸುಮಾರು 500 ಕ್ಕಿಂತಲೂ ಹೆಚ್ಚು ಹುದ್ದೆಗಳಿವೆ. ಕಳೆದ ಎರಡು ಬಾರಿ ನಡೆದ ಉದ್ಯೋಗ ಮೇಳದಲ್ಲಿ 1300 ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ ಎಂದು ತಿಳಿಸಿದರು.

Ad

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉಚಿತ ಅವಕಾಶವಿದ್ದು, ಯಾವುದೇ ರಿಜಿಸ್ಟ್ರೇಷನ್ ಶುಲ್ಕ ಇರುವುದಿಲ್ಲ. ಇಂತಹ ಪ್ರಯೋಜನವನ್ನು ಎಲ್ಲರೂ ಪಡೆದು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದೇ ನಮ್ಮ ಟ್ರಸ್ಟ್ ನ ಮತ್ತು MRG ಗ್ರೂಪ್ ನ ಉದ್ದೇಶವಾಗಿದೆ. ಈ ಬಾರಿ ಸುಮಾರು 1200 ರಿಂದ 1500 ಅಭ್ಯರ್ಥಿಗಳಿಗೆ ಈ ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗಬಹುದೆಂಬ ನಿರೀಕ್ಷೆ ಇದೆ ಎಂದರು.

Ad

ಪ್ರೊಗ್ರಾಮ್ ಡೈರೆಕ್ಟರ್ ಪ್ರೊ. ದಿವ್ಯ ರಾಣಿ ಪ್ರದೀಪ್ ಮಾತನಾಡಿ, ಇಂಜಿನಿಯರಿಂಗ್, Bsc, Bcom, BBA, MA, Mcom, MSc, MBA, MCA ಮತ್ತು ಇನ್ನಿತರ ಕಲಿತ ಮತ್ತು ಅಂತಿಮ ವರ್ಷದಲ್ಲಿ ಕಲಿಯುವ ವಿದ್ಯಾರ್ಥಿ ಗಳಿಗೆ ಇಂಟರ್ವ್ಯೂ ನಲ್ಲಿ ಭಾಗವಹಿಸಲು ಅವಕಾಶ ಇದೆ. ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 5 ಕಂಪನಿ ಗಳಲ್ಲಿ ಇಂಟರ್ ವ್ಯೂನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ 5 ಸೆಟ್ ಬಯೋ ಡಾಟಾ ತರಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಂಟರ್ ವ್ಯೂ ಸಮಿತಿಯ ಛೇರ್ಮನ್ ಗುರುಪ್ರಶಾಂತ್, ಟ್ರಸ್ಟ್ ನ ಕೋಶಧಿಕಾರಿ ವಿಜಿತ್ ಶೆಟ್ಟಿ, ಟ್ರಸ್ಟ್ ನ coordinator ಪದ್ಮನಾಭ ಹೆಗ್ಡೆ ಇದ್ದರು.

Ad
Ad
Ad
Nk Channel Final 21 09 2023