Bengaluru 22°C
Ad

ಬೈಂದೂರು: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ; ಆರೋಪಿ ಪರಾರಿ

ಮೀನು ಸಾಗಿಸುವ ಇನ್ಸುಲೇಟ‌ರ್ ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಘಟನೆ ಶಿರೂರು ಕರಿಕಟ್ಟೆ ಬಳಿ ನಡೆದಿದೆ.

ಉಡುಪಿ: ಮೀನು ಸಾಗಿಸುವ ಇನ್ಸುಲೇಟ‌ರ್ ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಘಟನೆ ಶಿರೂರು ಕರಿಕಟ್ಟೆ ಬಳಿ ನಡೆದಿದೆ. ಇನ್ಸುಲೇಟರ್ ವಾಹನ ಪಲ್ಟಿಯಾದ ಪರಿಣಾಮ ಈ ಘಟನೆ ಬೆಳಕಿಗೆ ಬಂದಿದೆ.

Ad

ಚ (1)

ಮೀನು ಬಾಕ್ಸ್‌ಗಳ ಜೊತೆಗೆ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಾತ್ರಿ ಹೊತ್ತು ಮಿನಿ ಇನ್ಸುಲೇಟರ್ ವಾಹನದೊಳಗೆ ಮೀನು ತುಂಬಿರುವ ಟ್ರೇಗಳನ್ನು ಇರಿಸಿಕೊಂಡು ಮದ್ಯದಲ್ಲಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು.

Ad

ಗ (1)

ವಾಹನವು ಭಟ್ಕಳದಿಂದ ಬೈಂದೂರು ಕಡೆಗೆ ಸಾಗುತ್ತಿದ್ದಾಗ ಕರಿಕಟ್ಟೆ ದುರ್ಗಾಂಬಿಕಾ ಹಾಲ್‌ ಹತ್ತಿರ ಪಲ್ಟಿಯಾಗಿದೆ. ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Ad
Nk Channel Final 21 09 2023