Bengaluru 22°C
Ad

ಅಂಬಾ ಟಿವಿ ಸೆಂಟರ್‌ನಲ್ಲಿ ಅಗ್ನಿ ಅವಘಡ: ಕೋಟ್ಯಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ

Kndpur

ಉಡುಪಿ: ಕುಂದಾಪುರ ತಾ| ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಅಂಬಾ ಟಿವಿ ಸೆಂಟರ್ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ಮೂಲದ ಸೊತ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ರವಿವಾರ ರಾತ್ರಿ 10:30ರ ಸುಮಾರಿಗೆ ಸುಧಾಕರ ಶೆಟ್ಟಿ ಮಾಲಿಕತ್ವದ ಅಂಬಾ ಟಿವಿ ಸೆಂಟರ್ ಒಳಗೆ ಸಂಭವಿಸಿದ ಶಾರ್ಟ್ ಸರ್ಕಿಟ್ ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು, ಕುಂದಾಪುರ ಉಡುಪಿಯ ಮೂರು ಅಗ್ನಿಶಾಮಕದಳದ ವಾಹನಗಳು, ಗಂಗೊಳ್ಳಿ ಪೊಲೀಸರು, ಗಂಗೊಳ್ಳಿ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಸಪಟ್ಟರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.

ಅಂಗಡಿ ಒಳಗೆ ಇದ್ದ ನಗದು 3 ಲಕ್ಷ ರೂ. ಕೂಡ ಸುಟ್ಟು ಹೋಗಿದ್ದು, ಈ ಬೆಂಕಿ ಅವಘಡದಿಂದ ಸುಮಾರು 1 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad