ಉಡುಪಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿವಾದ ವಿಚಾರವಾಗಿ ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಕಾರ್ಕಳದ ಪ್ರವಾಸೋದ್ಯಮದ ಕಗ್ಗೊಲೆ ಮಾಡಿದೆ. ಥೀಂ ಪಾರ್ಕ್ ಗೆ ಸರಕಾರ 4.50 ಕೋಟಿ ಹಣ ಮಂಜೂರಾರರೂ ಸರಕಾರ ಬಿಡುಗಡೆ ಮಾಡಿಲ್ಲ.
ಸೋಲಿನ ಹತಾಶೆಯಿಂದ ಕಾಂಗ್ರೆಸ್ ಸುಳ್ಳು ಆರೋಪ ಸೃಷ್ಟಿ ಮಾಡಿದೆ. ಶಿಲ್ಪಿ ವಿನ್ಯಾಸ ಬದಲಿಸಲು ಅನುಮತಿ ಪಡೆದು ಮೂರ್ತಿ ತೆರವು ಪ್ರಕ್ರಿಯೆ ಮಾಡಿದ್ದಾರೆ. ಸರಕಾರದ ಯೋಜನೆ ಹಸ್ತಾಂತರ ಮೊದಲೇ ತನಿಖೆ ಮಾಡುವ ಪರಂಪರೆ ಉಡುಪಿಯಲ್ಲಿ ಶುರುವಾಗಿದೆ.
ನಿರ್ಮಿತಿ ಕೇಂದ್ರ ಥೀಂ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿಲ್ಲ. ಗುಣಮಟ್ಟ ಸೇರಿದಂತೆ ಯಾವುದೇ ತನಿಖೆಗೆ ಸಿದ್ದ. ಶೀಘ್ರ ಪ್ರವಾಸಿ ತಾಣವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿ. ಸುಳ್ಳು ಆರೋಪ ಮಾಡುವವರ ಮೇಲೂ ಕ್ರಮ ಕೈಗೊಳ್ಳಬೇಕು. ಫೈಬರ್ ಮೂರ್ತಿ ಎಂದು ದೂರಿದವರು ಈಗ ಆರೋಪ ಕೈಬಿಟ್ಟಿದ್ದಾರೆ.
ಹೈಕೋರ್ಟ್ ಮೂರ್ತಿ ಕಂಚು ಎಂದಿದೆ ಕಾಂಗ್ರೆಸ್ ಈಗ ಆರೋಪ ಕೈಬಿಟ್ಟಿದೆ. ಜಿಲ್ಲಾ ಪೊಲೀಸ್ ಇಲಾಖೆ ಹೊಸ ಪರಂಪರೆ ಹುಟ್ಟುಹಾಕಿದೆ. ಗುಣಮಟ್ಟ ಸರಿಯಿಲ್ಲ ಎಂದು ಯಾವ ಇಲಾಖೆ ವರದಿ ನೀಡಿದೆ?. ಯಾರೂ ದೂರು ಕೊಡದೆ ಕಾಂಗ್ರೆಸ್ ಮುಖಂಡನ ಖಾಸಗಿ ದೂರಿಗೆ ಎಫ್ ಐ ಆರ್ ಆಗುತ್ತದೆ. ರಾಜಕೀಯ ಹಸ್ತಕ್ಷೇಪದಿಂದ ಕೇಸು ದಾಖಲಾಗಿದೆ.
ಖಾಸಗಿ ದೂರು ಕೊಡೋದಾದರೆ ಸಾವಿರಾರು ಎಫ್ ಐ ಆರ್ ದಾಖಲಾಗಬಹುದು. ಪರಾಜಿತ ಅಭ್ಯರ್ಥಿ ಮಹಜರಿಗೆ ಹೋಗುತ್ತಾರೆ ಇದಕ್ಕೆಲ್ಲ ತನಿಖಾಧಿಕಾರಿ ಉತ್ತರಿಸಬೇಕು. ಸರಕಾರ ಯೋಜನೆಗೆ ಬಾಕಿಯಿರುವ ಹಣ ಬಿಡುಗಡೆ ಮಾಡಬೇಕು.ಥೀಂ ಪಾರ್ಕ್ ನ ದಾರಿಗೆ ಮಣ್ಣು ಹಾಕಿದವರ ವಿರುದ್ಧ ಕ್ರಮ ಆಗಿಲ್ಲ .ಗ್ರಾಮಪಂಚಾಯತ್ ಅಧ್ಯಕ್ಷರ ದೂರಿನ ಎಫ್ ಐ ಆರ್ ಇನ್ನೂ ದಾಖಲಾಗಲಿಲ್ಲ.
ಶಿಲ್ಪಿ ಮೂರ್ತಿಯ ಮರುವಿನ್ಯಾಸದ ಕೋರಿದ್ದರು. ಡಿಸಿಯವರೇ ಮರುವಿನ್ಯಾಸ ಕ್ಕೆ ಅನುಮತಿ ಕೊಟ್ಟಿದ್ದಾರೆ. ಶಿಲ್ಪಿ ಮೂರ್ತಿ ತೆರವು ಮಾಡಿದರೆ ಅದು ಕಳ್ಳತನ ಹೇಗಾಗುತ್ತದೆ?. ಮೂರ್ತಿ ತೆರವಿಗೆ ತಹಶಿಲ್ದಾರ್ ಪೊಲೀಸ್ ಭದ್ರತೆ ಕೇಳಿದ್ದಾರೆ. ಅಂದು ಮೂರ್ತಿ ತೆರವಿಗೆ ಅವಕಾಶ ಕೊಟ್ಟವರೇ ಇಂದು ತನಿಖೆ ಮಾಡುತ್ತಿದ್ದಾರೆ. ಫೈಬರ್ ಉದಯನಿಗೆ ಕಲಾವಿದನ ಬಗ್ಗೆ ಅನುಕಂಪ ಇರಲಿಲ್ವಾ?, ನಿಮ್ಮದೇ ಸರಕಾರ ಇದೆ, ಪೂರ್ಣ ತನಿಖೆ ಮಾಡಿ.
ಕಾಮಗಾರಿ ನಿಂತು ಒಂದು ವರ್ಷವಾಯ್ತು, ಸುಮ್ಮನೆರ ಕಾಲಹರಣ ಮಾಡಲಾಗುತ್ತಿದೆ. ಪ್ರವಾಸೋಧ್ಯಮಕ್ಕೆ, ಸರಕಾರಕ್ಕೆ ನಷ್ಟ ವಾಗಿದೆ. ಪೊಲೀಸರು ಪ್ರಶ್ನಾವಳಿ ಕಾಂಗ್ರೆಸ್ ಕಚೇರಿಯಲ್ಲಿ ಸಿದ್ಧ ಮಾಡಿದ್ದಾರೆ. ಕಲಾವಿದನಿಗೆ ಏಳು ದಿನ ಕಸ್ಟಡಿ ಪಡೆದಿದ್ದಾರೆ. ಸ್ಲೋ ಪಾಯ್ಸನ್ ಹಾಕಿ ಮರ್ಡರ್ ಮಾಡಿದ ಪ್ರಕರಣದಲ್ಲಿ ನಾಲ್ಕು ದಿನ ಕಸ್ಟಡಿಗೆ ಪಡೆಯಲಾಗಿದೆ. ಒಂದು ವರ್ಷದಿಂದ ಏನು ತನಿಖೆ ಮಾಡಿದ್ದಾರೆ.
ಮನೆಯಲ್ಲಿ ಯಾರು ವಿಧಾನಸೌಧಕ್ಕೆ ಎಂದು ಕಾರ್ಕಳದ ಜನ ತೀರ್ಮಾನಿಸಿದ್ದಾರೆ. ನೀವು ಮನೆಯಲ್ಲಿ ಕೂರಲು ಜನ ತೀರ್ಮಾನಿಸಿದ್ದಾರೆ. ಜೀವಂತ ಶವಯಾತ್ರೆ ಮಾಡಿದವರು ಅಮಾಯಕ ಶಿಲ್ಪಿಯ ಅನ್ನದ ತಟ್ಟೆಗೆ ಕಲ್ಲು ಹಾಕಿದ್ದಾರೆ. ಪ್ರವಾಸೋದ್ಯಮ, ಕಾರ್ಕಳ ವಿಕಾಸ ಆಗಬಾರದು ಎಂಬೂದು ಕಾಂಗ್ರೆಸ್ ನ ಉದ್ದೇಶದಿಂದ ಫೈಬರ್ ಉದಯನಿಂದ ಪ್ರವಾಸೋದ್ಯಮ ಹಾಳಾಗಿದೆ.
ಉದಯಕುಮಾರ್ ಕಾಮಗಾರಿ ಮೇಲೆ ಪ್ರೈವೇಟ್ ಕಂಪ್ಲೆಟ್ ಮಾಡಿದರೆ ನೂರಾರು ಎಫ್ ಐ ಆರ್ ಆಗಬಹುದು. ತನಿಖಾಧಿಕಾರಿಗಳು ಮತ್ತು ಅಪಪ್ರಚಾರ ಸುಳ್ಳಿನ ಸರಮಾಲೆಯ ಮೇಲೂ ಕ್ರಮ ಆಗಲಿ. ಕಾರ್ಕಳದ ದ್ವೇಷಿಗಳು ಅಭಿವೃದ್ಧಿ ವಿರೋಧ ಮಾಡುತ್ತಿದ್ದಾರೆ. ಗೋಮಾಳ ಜಾಗದಲ್ಲಿ ಸಾರ್ವಜನಿಕ ಚಟುವಟಿಕೆ ಮಾಡಬಹುದು. ಕಾಮಗಾರಿ ಪೆಂಡಿಗ್ ಇದ್ದಾಗ ಎಷ್ಟು ಉದ್ಘಾಟನೆಗಳು ಆಗಿಲ್ಲ?. ಈ ಯೋಜನೆಯಲ್ಲಿ ಐದಾರು ಇಲಾಖೆಯ ಅನುದಾನ ಇದೆ.
ಆರೋಪಿಸುವ ಮೂರ್ಖರಿಗೆ ಥೀಂ ಪಾರ್ಕ್ ನ ಕಲ್ಪನೆಯೇ ಇಲ್ಲ. ಮೂರ್ತಿಯ ಬಿಡಿಭಾಗ ಪೊಲೀಸ್ ಅಧಿಕಾರಿ ಸಮ್ಮುಖದಲ್ಲೇ ಆಗಿದೆ ಅವರನ್ನು ಸಸ್ಪೆಂಡ್ ಮಾಡಿ.ನಾನು ಯಾಕೆ ಕ್ಷಮೆ ಕೇಳಬೇಕು? ನೀವು ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಕಲಾವಿದ ಮೂರ್ತಿಯ ಮರು ವಿನ್ಯಾಸಕ್ಕೆ ಹೆಚ್ಚುವರಿ ಹಣ ಕೇಳಿಲ್ಲ. ಫೈಬರ್ ಉದಯ, ಟಾರ್ಚರ್ ಉದಯ, ಮೆಕ್ಯಾನಿಕಲ್ ಎಂಜಿನಿಯರ್ ಉದಯ ಎಂದು ಸುನೀಲ್ ತಿರುಗೇಟು ನೀಡಿದ್ದಾರೆ.