Bengaluru 27°C
Ad

ಕಾರ್ಕಳ: ನೀರೆ ಗ್ರಾಪಂನಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು

ಕಾರ್ಕಳ ತಾಲೂಕಿನ ನೀರೆ ಗ್ರಾಪಂ 3 ಸ್ಥಾನಕ್ಕೆ ನೀರೆ-1ರಲ್ಲಿ (ಅ.ಪಂ. ಮಹಿಳಾ ಮೀಸಲಾತಿ) 1 ಸ್ಥಾನವಿದ್ದು ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ಓರ್ವರೆ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಡುಪಿ: ಕಾರ್ಕಳ ತಾಲೂಕಿನ ನೀರೆ ಗ್ರಾಪಂ 3 ಸ್ಥಾನಕ್ಕೆ ನೀರೆ-1ರಲ್ಲಿ (ಅ.ಪಂ. ಮಹಿಳಾ ಮೀಸಲಾತಿ) 1 ಸ್ಥಾನವಿದ್ದು ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ಓರ್ವರೆ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದರು.

Ad

ನೀರೆ-2ರಲ್ಲಿ (ಹಿಂದುಳಿದ ಅ ವರ್ಗ/ಸಾಮಾನ್ಯ) 2 ಸ್ಥಾನವಿದ್ದು, ಕಾಂಗ್ರೆಸ್‌ನಿಂದ ಪ್ರಸನ್ನ ಆಚಾರ್ಯ ಸ್ಪರ್ಧಿಸಿದ್ದರೆ, ಮಹೇಶ್ ಹಾಗೂ ರಾಜೇಂದ್ರ ಶೆಟ್ಟಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.

Ad

ಇವರಲ್ಲಿ ರಾಜೇಂದ್ರ ಶೆಟ್ಟಿ 422, ಮಹೇಶ್ 405 ಹಾಗೂ ಪ್ರಸನ್ನ ಆಚಾರ್ಯ 151 ಮತಗಳನ್ನು ಪಡೆದಿದ್ದು, ರಾಜೇಂದ್ರ ಮತ್ತು ಮಹೇಶ್ ಗೆಲುವು ಸಾಧಿಸಿದ್ದಾರೆ. ನೀರೆ -2ರಲ್ಲಿ 375 ಪುರುಷರು, 442 ಮಹಿಳೆಯರು ಸೇರಿದಂತೆ ಒಟ್ಟು 817 ಮತದಾರರಿದ್ದು, 63.6475ಶೇ. ಮತದಾನವಾಗಿತ್ತು.

Ad
Ad
Ad
Nk Channel Final 21 09 2023