Bengaluru 28°C
Ad

ಜನಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿ: ಶಾಸಕ ಗುರುರಾಜ್ ಗಂಟಿಹೊಳೆ

ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ವಿರುದ್ಧ ಜನಾಂದೋಲ ಎದ್ದಿದೆ. ಕಳೆದ ಹತ್ತು, ಹನ್ನೊಂದು ವರ್ಷಗಳ ಹಿಂದೆ ಆದಂತಹ ಹೋರಾಟಗಳು ಫಲ ಕೊಟ್ಟಿಲ್ಲ.

ಉಡುಪಿ: ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ವಿರುದ್ಧ ಜನಾಂದೋಲ ಎದ್ದಿದೆ. ಕಳೆದ ಹತ್ತು, ಹನ್ನೊಂದು ವರ್ಷಗಳ ಹಿಂದೆ ಆದಂತಹ ಹೋರಾಟಗಳು ಫಲ ಕೊಟ್ಟಿಲ್ಲ. ಒಟ್ಟು ಆಡಳಿತ ವ್ಯವಸ್ಥೆ ಅದನ್ನು ನಿರ್ಲಕ್ಷ್ಯ ಮಾಡಿದೆ ಎಂಬ ನೋವು ನಮಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಡು, ಪರಿಸರ ಉಳಿಸಲು ನಮ್ಮ ವಿರೋಧವಿಲ್ಲ. ಆದರೆ ಅಲ್ಲಿಯೇ ಬದುಕು ಕಟ್ಟಿಕೊಂಡು ಬಂದಿರುವ ಜನರ ಬದುಕಿಗೆ ಏನು ಎಂಬುವುದನ್ನು ಯಾರಲ್ಲೂ ಉತ್ತರವಿಲ್ಲ. ಇದರ ಆತಂಕದಲ್ಲಿ ನಾವಿದ್ದೇವೆ ಎಂದರು.

ನ್ಯಾಯಾಲಯ ಹಾಗೂ ಕೇಂದ್ರ ಸರಕಾರದ ಕಾಡು ಉಳಿಸಿ ಎಂಬ ಕಾಳಜಿಯ ಪರ ನಾವು ಇದ್ದೇವೆ. ಕಾಡು, ಪರಿಸರ, ಪ್ರಕೃತಿ ಉಳಿಬೇಕು ಆಗ ಮಾತ್ರ ಜನಜೀವನ ಉಳಿಯುತ್ತದೆ. ಆದರೆ ಜನಜೀವನಕ್ಕೆ ತೊಂದರೆ ಆಗುವ ರೀತಿಯಲ್ಲಿ ವರದಿ ಇರುವುದರಿಂದ ಜನರ ಬದುಕಿಗೆ ಏನು ಎಂಬ ಉತ್ತರ ಸಿಗುತ್ತಿಲ್ಲ. ಹಾಗಾಗಿ ಸಹಜವಾಗಿಯೇ ಜನರಲ್ಲಿ‌ ಆಕ್ರೋಶವಿದೆ. ಜನಾಂದೋಲ ಆಗುತ್ತಿದೆ ಎಂದು ತಿಳಿಸಿದರು.

ಜನಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ಏನೂ ಮಾಡಬಹುದು. ಅದನ್ನು ಸರಿಯಾಗಿ ಮಾಡಿ ಎಂಬುವುದು ನಮ್ಮ‌ ಮನವಿ. ಅಲ್ಲಿ ಇರುವವರು ಈಗ ಹೋಗಿ ಅಕ್ರಮವಾಗಿ ನೆಲೆಸಿರುವವರಲ್ಲ. ಎಷ್ಟು ವರ್ಷದಿಂದ ಅಲ್ಲಿ ನೆಲೆಸಿದ್ದಾರೆ. ಮೂಲ ಪಟ್ಟದ ಸ್ಥಳ ಎಷ್ಟಿದೆ. ಇದೆಲ್ಲವನ್ನೂ ನೋಡದೆ ನೇರವಾಗಿ ಕಾನೂನು ಹೇರಬಾರದು ಎಂದು ಅವರು ಆಗ್ರಹಿಸಿದರು.

Ad
Ad
Nk Channel Final 21 09 2023