ಉಡುಪಿ: ಏಕಕಾಲದಲ್ಲಿ ಎರಡು ಮನೆಗಳಿಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮದ್ಯದ ಬಾಕ್ಸ್ ಗಳನ್ನು ವಶಪಡಿಸಿಕೊಂಡ ಘಟನೆ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಇಂದು ನಡೆದಿದೆ.
Ad
ಅಬಕಾರಿ ಉಪ ಆಯುಕ್ತೆ ಬಿಂದು ಅವರ ನೇತೃತ್ವದಲ್ಲಿ ಬೋಳದ ಅವಿನಾಶ್ ಮಲ್ಲಿ ಎಂಬವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ದುಬಾರಿ ಮೌಲ್ಯದ ಮದ್ಯದ ಬಾಟಲಿಗಳ ಬಾಕ್ಸ್‌ಗಳು ಪತ್ತೆಯಾಗಿವೆ. 200 ಕ್ಕೂ ಅಧಿಕ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದು, ಬ್ರ್ಯಾಂಡೆಡ್ ಮಾಲ್‌ಗಳಾದ ಜಾನಿ ವಾಕರ್ ಬ್ಲಾಕ್ ಲೇಬಲ್, ಬ್ಲ್ಯಾಕ್ ಆಂಡ್ ವೈಟ್, ಮ್ಯಾನ್ಶನ್ ಹೌಸ್ (MH), ಮ್ಯಾಕ್‌ಡ್ವೆಲ್ (MC), ಓಡ್ಕ ಲೇಬಲ್‌ನ ಮದ್ಯ ಎಂದು ತಿಳಿದುಬಂದಿದೆ.
Ad
ಗ್ರಾಮೀಣ ಭಾಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ಅಧಿಕಾರಿಗಳು ದಂಗಾಗಿದ್ದಾರೆ. ನಕಲಿ ಮದ್ಯ ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
Ad
Ad