ಉಡುಪಿ: ಅಭಿವೃದ್ಧಿ ಎಷ್ಟು ಪೂರಕವೋ ಅದರ ಸಮರ್ಪಕ ನಿರ್ವಹಣೆ ಇಲ್ಲದೆ ಇದ್ದರೆ ಅಷ್ಟೇ ಮಾರಕ. ಒಂದು ಪ್ರಸಿದ್ಧ ದೈವಿ ಕ್ಷೇತ್ರ ಎಂದು ಕ್ಷಣ ಅಲ್ಲಿ ನೂರಾರು ವ್ಯಾಪಾರ ವಹಿವಾಟುಗಳು ಸಹಜ. ದೇವಸ್ಥಾನಕ್ಕೆ ಹರಿದು ಬರುವ ಲಕ್ಷಾಂತರ ಭಕ್ತರನ್ನ ಸೆಳೆಯಲು ನಾನು ವ್ಯವಸ್ಥೆಗಳನ್ನ ಮಾಡಲು ಹೋಟೆಲ್ ಉದ್ಯಮಗಳು ತಾಮುಂದೆ ನಾ ಮುಂದೆ ಎಂದು ಬರುತ್ತವೆ.
ಆದರೆ ಅದೇ ಹೋಟೇಲ್ ಉದ್ಯಮದ ಬೇಜವಾಬ್ದಾರಿ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಸ್ಥಳೀಯರು ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಕುಂಭಾಶಿ ಗ್ರಾಮ ಸಾಕ್ಷಿ. ಹೌದು ನಾವು ಹೇಳುತ್ತಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬರುವ ಅತ್ಯಂತ ಪ್ರಸಿದ್ಧ ಕ್ಷೇತ್ರಗಳಲ್ಲಿ ಬಂದಾಗ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವಿರುವ ಕುಂಭಾಶಿ ಗ್ರಾಮದ್ದು.
ಆನೆಗುಡ್ಡೆ ಶ್ರೀ ವಿನಾಯಕ ಎಂದು ಕ್ಷಣ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಹರಿದು ಬರುವುದು ನಿಮ್ಮ ಕಣ್ಣ ಮುಂದೆ ಬರುತ್ತದೆ. ಇದೆ ಭಕ್ತ ಸಾಗರವನ್ನು ಗಮನದಲ್ಲಿರಿಸಿ ಕುಂಭಾಶಿ ಗ್ರಾಮದಲ್ಲಿ ಸಾಕಷ್ಟು ಉದ್ಯಮಗಳು ತಲೆ ಎತ್ತಿವೆ. ಮೂರು ನಾಲ್ಕು ವರ್ಷಗಳ ಹಿಂದೆ ಇಲ್ಲಿ ಶುಚಿ ರುಚಿ ಯಾದ ಆಹಾರದ ಜೊತೆಗೆ ಉಳಿಯುವುದು ಉಳಿದುಕೊಳ್ಳಲು ಲಾಡ್ಜಿಂಗ್ ವ್ಯವಸ್ಥೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಾಜ್ಯದ ಹೆಸರಾಂತ ಹೋಟೆಲ್ ಉದ್ಯಮ ಒಂದು ತಲೆಯೆತ್ತಿದೆ.
ಪ್ರಾರಂಭದಲ್ಲಿ ಗ್ರಾಮದ ಜನ ಹಾಗೂ ಹೋಟೆಲ್ ಅಕ್ಕಪಕ್ಕದ ಸ್ಥಳೀಯರನ್ನ ಗಮನದಲ್ಲಿರಿಸಿ ಉದ್ಯಮ ನಡೆಸುವುದಾಗಿ ಭರವಸೆ ನೀಡಿದ್ದ ಸಂಸ್ಥೆ ಈಗ ಕೇವಲ ವ್ಯವಹಾರಿಕವಾಗಿ ವರ್ತಿಸುತ್ತಿರುವುದು ಸದ್ಯದ ಸಮಸ್ಯೆಗೆ ಕಾರಣ. ಹೋಟೆಲ್ ನಲ್ಲಿ ತಿಂದು ಉಂಡು ಮಿಕ್ಕಿ ಉಳಿದ ತ್ಯಾಜ್ಯದ ನೀರನ್ನು ರಾತ್ರಿ ವೇಳೆ ಹರಿಯುವ ನೀರಿನ ಸಾರ್ವಜನಿಕ ತೋಳಿಗೆ ಬಿಡುತ್ತಿರುವ ಪರಿಣಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಿದ ಹೊರತಾಗಿಯೂ ಈ ಹೋಟೆಲ್ ಸಂಸ್ಥೆ ದಿನವೂ ತ್ಯಾಜ್ಯವನ್ನ ಗ್ರಾಮಸ್ಥರ ಮಡಿಲಿಗೆ ಹಾಕುವ ಕೆಲಸ ಮಾಡುತ್ತಿದೆ. ಗ್ರಾ ಪಂ. ವ್ಯಾಪ್ತಿಯ 3ನೇ ವಾರ್ಡ್ ನಲ್ಲಿರುವ ಹೋಟೆಲ್ ವೊಂದರ ಕಲುಷಿತ ನೀರು 30ಕ್ಕೂ ಅಧಿಕ ಜನ ವಸತಿ ಪ್ರದೇಶಗಳ ನಡುವೆ ಹಾದು ಹೋಗುವ ನೈಸರ್ಗಿಕವಾಗಿರುವ ತೋಡಿನಲ್ಲಿ ಶೇಖರಣೆಯಾಗಿದ್ದು ಪರಿಣಾಮ ಇಡೀ ಪರಿಸರವೇ ಸಂಪೂರ್ಣ ಗಬ್ಬು ನಾರುವ ಮೂಲಕ ಜನರ ಆರೋಗ್ಯ ಹದಗೆಡುತ್ತಿದ್ದು, ಉಸಿರಾಟದ ತೊಂದರೆ, ಸಾಂಕ್ರಾಮಿಕ ರೋಗಭೀತಿಯಲ್ಲಿ ಬದುಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪಶ್ಚಿಮ ದಿಕ್ಕಿನಲ್ಲಿರುವ ಈ ಹೋಟೆಲ್ ಉದ್ಯಮದ ಹಿಂಭಾಗದಲ್ಲಿ ಸಾಕಷ್ಟು ದೊಡ್ಡ ಜನವಸತಿ ಇರುವ ಗ್ರಾಮವೇ ಇದೆ. ಕೃಷಿ ಬಳಕೆ ಮತ್ತು ಸರಾಗವಾಗಿ ನೀರು ಹರಿದು ಹೋಗುವ ಸಲುವಾಗಿ ಅನಾದಿಕಾಲದಿಂದ ನಿರ್ಮಾಣ ಮಾಡಲಾಗಿದ್ದ ನೀರಿನ ತೋಡು ಸದ್ಯ ಹೋಟೆಲ್ ಉದ್ಯಮಿ ಗಳಿಗೆ ತ್ಯಾಜ್ಯ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಕಲುಷಿತ ನೀರು ಸಾರ್ವಜನಿಕ ತೋಡಿನಲ್ಲಿ ಹರಿಯುತ್ತಿದ್ದು, ಪರಿಸರವು ಸಂಪೂರ್ಣ ದುರ್ನಾತ ಬೀರುತ್ತಿದೆ.
ಪ್ರಸ್ತುತ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿರುವ ಪರಿಣಾಮ ಸ್ಥಳೀಯ ನಿವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆಲ್ಲಾ ಕುಂಭಾಶಿ ಶ್ರೀ ಹರಿಹರ ದೇಗುಲದ ಪುಷ್ಕರಿಣಿಯಿಂದ ಪವಿತ್ರವಾದ ನೀರು ಈ ತೋಡಿನಲ್ಲಿ ಹರಿದು ಬರುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿತ್ತು. ಆದರೆ ಇತೀಚಿನ ದಿನಗಳಲ್ಲಿ ರಾತೋರಾತ್ರಿ ಈ ತೋಡಿನಲ್ಲಿ ಸಂಪೂರ್ಣ ಕಲುಷಿತ ನೀರು ಬಿಡುವ ಪರಿಣಾಮ ಪರಿಸರದಲ್ಲಿ ಸೊಳ್ಳೆಗಳ ಕಾಟ ಹಾಗೂ ಆರೋಗ್ಯದ ಮೇಲೆ ತೀವ್ರ ತೆರನಾದ ಪರಿಣಾಮ ಬೀರುತ್ತಿದೆ.
ಅಲ್ಲದೆ ಪರಿಸರದ ನೀರಿನ ಬಾವಿ ಹಾಗೂ ಕುಂಭಾಶಿ ಆನೆಗುಡ್ಡೆ ದೇಗುಲಕ್ಕೆ ಸರಬರಾಜಾಗುವ ಬೃಹತ್ ಬಾವಿಯ ನೀರೂ ಮಲಿನಗೊಂಡಿದೆ. ಈ ಬಗ್ಗೆ ಹಿಂದೆ ಗ್ರಾಮಸಭೆಯಲ್ಲೂ ಪ್ರಸ್ತಾವಿಸಲಾಗಿತ್ತು. ಸ್ವಲ್ಪ ದಿನಗಳ ಕಾಲ ನೀರನ್ನ ಶುದ್ಧೀಕರಿಸಿ ಬಿಡುತ್ತಿದ್ದ ಹೋಟೆಲ್ ಉದ್ಯಮದವರು ಮತ್ತೆ ನಿತ್ಯವೂ ಅದೇ ಕೆಲಸವನ್ನು ಮಾಡುತ್ತಿರುವುದು ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.