Bengaluru 23°C
Ad

ಕೋಟತಟ್ಟು ಗ್ರಾಮದಲ್ಲಿ ಹೆಜ್ಜೇನು ದಾಳಿ; ಮೂವರಿಗೆ ಗಾಯ

ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರಿಕೆರೆಯಲ್ಲಿ ಹೆಜ್ಜೇನು ದಾಳಿಯಿಂದ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರಿಕೆರೆಯಲ್ಲಿ ಹೆಜ್ಜೇನು ದಾಳಿಯಿಂದ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ. ಹೆಜ್ಜೇನು ದಾಳಿಗೊಳಗಾದ ಪಂಚಾಯತ್ ಅಧ್ಯಕ್ಷ ಸತೀಶ್ ಬಿ. ಕುಂದರ್, ಉಪಾಧ್ಯಕ್ಷೆ ಸರಸ್ವತಿ ಹಾಗೂ ಅವರ ಮಗಳು ಸೌಜನ್ಯ ಎಂದು ಗುರುತಿಸಲಾಗಿದೆ.

Ad

ಸರಸ್ವತಿ ಹಾಗೂ ಸೌಜನ್ಯ ಕಲ್ಮಾಡಿ ರಸ್ತೆಯಲ್ಲಿರುವ ನಾಗಬನಕ್ಕೆ ಹೋದ ಸಂದರ್ಭ ಹೆಜ್ಜೇನು ಹಿಂಡೊಂದು ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಾಗ ಅವರ ಸಹಾಯಕ್ಕೆ ದಾವಿಸಿದ್ದ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಅವರು ಕೂಡ ಜೇನು ನೊಣಗಳ ಕಡಿತಕ್ಕೆ ಒಳಗಾಗಿದ್ದಾರೆ.

Ad

ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಈ ಮೂವರನ್ನು ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡವರನ್ನು ತಕ್ಷಣ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಆಂಬುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Ad
Ad
Ad
Nk Channel Final 21 09 2023