ಉಡುಪಿ: ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪರಿಕಲ್ಪನೆಯ ರಾಮರಾಜ್ಯ ಯೋಜನೆಯಂತೆ ಶ್ರೀಮಠದ ವತಿಯಿಂದ ದಾನಿಗಳ ನೆರವಿನೊಂದಿಗೆ ಉಡುಪಿ ಜಿಲ್ಲೆ ನೀಲಾವರ ಗ್ರಾಮದ ಸತೀಶ್ ನಾಯ್ಕ ಎಂಬವರ ಕುಟುಂಬಕ್ಕೆ ನಿರ್ಮಿಸಿಕೊಡಲಾಗಿರುವ ಮನೆಯನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಮನೆಗೆ ಶ್ರೀರಾಮಸದನ ಎಂಬ ಹೆಸರನ್ನು ಸೂಚಿಸಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮನೆ ಮಂದಿಗೆ ಅನುಗ್ರಹ ಸಂದೇಶ ನೀಡಿ ಹರಸಿದ್ದಲ್ಲದೇ ಎಲ್ಲರಿಗೂ ಶ್ರೀ ರಾಮಸಂಕೀರ್ತನೆ ಹೇಳಿಕೊಟ್ಟು ತಾವೂ ಹಾಡಿ ನಿತ್ಯವೂ ಭಜನೆ ಸಂಕೀರ್ತನೆಗಳನ್ನು ಹಾಡುವಂತೆ ಸೂಚಿಸಿದರು . ಆಸ್ಟ್ರೇಲಿಯಾ ದ ಯೋಗಗರು ರಾಜೇಂದ್ರ ಎಂಕಮೂಲೆಯವರು ಈ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದರು . ವಾಸುದೇವ ಭಟ್ ಪೆರಂಪಳ್ಳಿ ,ಅಶ್ವಿನ್ ಉಪಸ್ಥಿತರಿದ್ದರು.