ಉಡುಪಿ: ಗೋವಾ ಅಕ್ರಮ ಮದ್ಯ ವಶಪಡಿಸಿಕೊಂಡ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿದ್ದು, ಈ ವಿಚಾರವಾಗಿ ಅಬಕಾರಿ ಇಲಾಖೆ ಎಡಿಸಿ ಬಿಂದುಶ್ರೀ ಹೇಳಿಕೆ ನೀಡಿದ್ದಾರೆ. ಒಟ್ಟು 15 ಲಕ್ಷ ರುಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದೇವೆ. ಕಾರ್ಕಳ ತಾಲೂಕು ಬೋಳ ಗ್ರಾಮದ ಅಬ್ಯನಡ್ಕದಲ್ಲಿ ಕಾರ್ಯಾಚರಣೆಯಾಗಿದೆ ಎಂದರು.
Ad
ಅವಿನಾಶ್ ಮಲ್ಲಿಯವರ ಮನೆಗೆ ದಾಳಿ ಮಾಡಿದ್ದೇವೆ. ಬರಿಮಾರು ಗುತ್ತು ಎಂಬ ಮನೆಗೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 272 ಪೆಟ್ಟಿಗೆ ಮದ್ಯ ವಶಪಡಿಸಿಕೊಂಡಿದ್ದೇವೆ. ದಾಳಿಯಲ್ಲಿ ಒಟ್ಟು 2360.850 ಲೀಟರ್ ಮದ್ಯ ಜಪ್ತಿ ಮಾಡಿದ್ದೇವೆ ಎಂದರು.
Ad
ವಿವಿಧ ಬ್ರ್ಯಾಂಡ್ ಗಳ ಗೋವಾದ ಲಿಕ್ಕರ್ ಗಳನ್ನು ಅಕ್ರಮ ದಾಸ್ತಾನು ಮಾಡಲಾಗಿತ್ತು. ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ, ಬೋಳದ ಅವಿನಾಶ್ ಮಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದರು.
Ad
Ad