Bengaluru 17°C

ಐದು ವರ್ಷದ ಮಗುವಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು; ಎಸ್ಪಿ ಡಾ. ಅರುಣ್

ಐದು ವರ್ಷದ ಮಗುವಿಗೆ ಲೈಂಗಿಕ ದೌರ್ಜನ್ಯ ನೀಡಿದ ವ್ಯಕ್ತಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಡಾ. ಅರುಣ್ ಹೇಳಿದ್ದಾರೆ.

 ಉಡುಪಿ: ಐದು ವರ್ಷದ ಮಗುವಿಗೆ ಲೈಂಗಿಕ ದೌರ್ಜನ್ಯ ನೀಡಿದ ವ್ಯಕ್ತಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಡಾ. ಅರುಣ್ ಹೇಳಿದ್ದಾರೆ.


ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಆರೋಪಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಭಿಕ್ಷೆ ಬೇಡುತ್ತಿದ್ದ. ಆಟವಾಡುತ್ತಿದ್ದ ಮಗುವಿಗೆ ಕೈಸನ್ನೆ ಮೂಲಕ ಚಾಕಲೇಟ್ ಆಸೆ ತೋರಿಸಿ ಕರೆದಿದ್ದಾನೆ.


ಮಗುವನ್ನು ಪುಸಲಾಯಿಸಿ ಕಾಲು ದಾರಿಯಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ ಖಾಸಗಿ ಅಂಗಗಳನ್ನು ಮುಟ್ಟುತ್ತಲೇ ಮಗು ಕಿರುಚಾಡಿದೆ. ಕೂಡಲೇ ಆರೋಪಿ ಪರಾರಿಯಾಗಿದ್ದು ಸಂಬಂಧಿಕರು, ಸ್ಥಳೀಯರು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದು ಹೇಳಿದ್ದಾರೆ.


ಮಗುವಿನ ಖಾಸಗಿ ಅಂಗಗಳನ್ನು ಆರೋಪಿ ಮುಟ್ಟಿದ್ದಾನೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಫೋಟೋ ಸಾರ್ವಜನಿಕರಲ್ಲಿ ಶೇರ್ ಮಾಡಲಾಗಿದೆ. ಆರೋಪಿ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ನಗರ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.


ಆದಷ್ಟು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಇದೆ. ಈಗಾಗಲೇ ವೈದ್ಯರಿಂದ ಕೌನ್ಸಿಲಿಂಗ್ ಕೂಡ ನಡೆದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.


Nk Channel Final 21 09 2023