ಉಡುಪಿ: ಶಾಮಿಯಾನದ ಗೋಡೌನ್ ನಲ್ಲಿ ಬೆಂಕಿ ಅವಘಡ ಉಂಟಾದ ಘಟನೆ ಸೋಮವಾರ ಮುಂಜಾನೆ 3.30ರ ಸುಮಾರಿಗೆ ಅಲೆವೂರಿನಲ್ಲಿ ಸಂಭವಿಸಿದೆ. ಶಾಂತಲಾ ಈವೆಂಟ್ಸ್ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ರಮಾನಂದ ನಾಯಕ್ ಒಡೆತನದ ಶಾಂತಲಾ ಈವೆಂಟ್ ಗೋಡೌನ್ ನಲ್ಲಿ ಘಟನೆ ನಡೆದಿದ್ದು, ಶಾಮಿಯಾನದ ಮ್ಯಾಟ್ ಗಳನ್ನು ಶೇಖರಿಸಿಟ್ಟಿದ್ದ ಸ್ಥಳದಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವಾಟರ್ ಟ್ಯಾಂಕ್ ಸೇರಿದಂತೆ ಎಲ್ಲಾ ಪರಿಕರಗಳಿಗೆ ಬೆಂಕಿ ಹತ್ತಿಕೊಂಡಿದೆ.
ಕೂಡಲೇ ಅಗ್ನಿಶಾಮಕಗಳ ಸ್ಥಳಕ್ಕೆ ಆಗಮಿಸಿ, ಬೆಂಕಿನಂದಿಸುವ ಕೆಲಸ ಮಾಡಿದೆ. ಸುತ್ತಮುತ್ತಲ ಪ್ರದೇಶಗಳಿಗೆ ಬೆಂಕಿ ಆವರಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಗೋಡೌನ್ ಗೆ ಯಾವುದೇ ವಿದ್ಯುತ್ ಸಂಪರ್ಕ ಇರಲಿಲ್ಲ ಇಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಹಚ್ಚಿರಬಹುದಾ ಎಂಬ ಸಂಶಯವೂ ಇದೆ.