Bengaluru 27°C

ಸುಲಿಗೆ ಪ್ರಕರಣ : 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳದ ಸುರೇಶ್‌‌ ಪುರುಷ(45) ಬಂಧಿತ ಆರೋಪಿ.

ಉಡುಪಿ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳದ ಸುರೇಶ್‌‌ ಪುರುಷ(45) ಬಂಧಿತ ಆರೋಪಿ. ಈತ ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಳಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಹಿರಿಯಡ್ಕ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ ಮರಬದ ರವರ ನೇತೃತ್ವದಲ್ಲಿ ಠಾಣಾ ಹೆಚ್‌ಸಿ ಗುರುರಾಜ್ ಸಿಹೆಚ್‌ಸಿ ದಯಾನಂದ ಪ್ರಭು ಹಾಗೂ ಸಿಪಿಸಿ ಕೃಷ್ಣ ಪೂಜಾರಿ ಅವರು 18 ವರ್ಷಗಳ ಬಳಿಕ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


Nk Channel Final 21 09 2023