Bengaluru 22°C
Ad

ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ,ಉಡುಪಿ ಜಿಲ್ಲೆ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ರಿ.)ಕರ್ನಾಟಕ- ಕೇರಳ ಮತ್ತು ನ್ಯಾಯಕೂಟ ಇವರ ಆಶ್ರಯದಲ್ಲಿ ಇಂದು ಮತ್ತು ನಾಳೆ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿಯ ನ್ನು ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ ನಲ್ಲಿ ಆಯೋಜಿಸಲಾಗಿತ್ತು.

ಉಡುಪಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ,ಉಡುಪಿ ಜಿಲ್ಲೆ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ರಿ.)ಕರ್ನಾಟಕ- ಕೇರಳ ಮತ್ತು ನ್ಯಾಯಕೂಟ ಇವರ ಆಶ್ರಯದಲ್ಲಿ ಇಂದು ಮತ್ತು ನಾಳೆ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿಯ ನ್ನು ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ ನಲ್ಲಿ ಆಯೋಜಿಸಲಾಗಿತ್ತು.

ಕಾಪು ತಾಲೂಕು ತಹಶೀಲ್ದಾರರಾದ ಡಾ. ಪ್ರತಿಭಾ ಆರ್ ರವರು ಸಿಂಗಾರವನ್ನು ಅರಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಇವರು ಕಾರ್ಯಕ್ರಮದ ಕುರಿತಾಗಿ ಸಮುದಾಯದ ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣವನ್ನು ಪಡೆದುಕೊಂಡು, ಮುಖ್ಯವಾಹಿನಿಗೆ ಬಂದು ಅಬಲೆಯಾರಾಗದೆ ಸಬಲೆಯರಾಗಿ,
ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾಗಬೇಕು.

ಹೆಣ್ಣು ಹುಟ್ಟಿನಿಂದ ಸಾವಿನ ವರೆಗೆ ನೋವುಗಳನ್ನು ಅನುಭವಿಸಿಕೊಂಡು, ಹೆಣ್ತತನವನ್ನು ಅನುಭವಿಸಿಕೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಹೆಚ್ಚಿನ ಪ್ರಯತ್ನ ಪಡಬೇಕು ಎಂಬುದಾಗಿ ಕಾಪು ತಾಲೂಕು ತಹಶೀಲ್ದಾರಾಗಿರುವ ಡಾ. ಪ್ರತಿಭಾ.ಆರ್ ಮಾತಾಡಿದರು.

ನಂತರ ನಮ್ಮ ನ್ಯಾಯಕೂಟದ ಅಧ್ಯಕ್ಷರಾದ ಬಾಲರಾಜ್ ಕೋಡಿಕಲ್ ಇವರು ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಪ್ರಾಮುಖ್ಯತೆಯ ಬಗ್ಗೆ ತಮ್ಮ ಅನುಭವದ ಘಟನೆಗಳನ್ನು ಹಂಚಿಕೊಳ್ಳುವ ಮೂಲಕ ವಿವರಿಸಿದರು. ಹಾಗೆಯೇ ಹೆಣ್ತನದ ಮೌಲ್ಯವನ್ನು ಎತ್ತಿ ಹಿಡಿಯುವಂತಹ ಕೆಲಸಗಳನ್ನು ಮಾಡಬೇಕು. ಮಾತೃ ಮೂಲ ಪರಂಪರೆಯ ಮಹತ್ವವನ್ನು ಅರಿಯಬೇಕು. ಹಾಗೂ ಇದನ್ನು ಉಳಿಸುವಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು. ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿ ಅವಕಾಶಗಳನ್ನು ಹೆಚ್ಚಿಸಿ ಅವರ ಜೊತೆ ನಾವು ಬೆಳೆಯಬೇಕು ಎಂದರು.

ನಂತರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀನಿವಾಸ ಉಪಾಧ್ಯ ಬಿ ವಕೀಲರು ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕರು ಇವರು ಪೋಕ್ಸೋ (POCSO) ಕಾಯಿದೆಯ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು. ಹದಿಹರೆಯದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ಹೆಣ್ಣು ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಇವುಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ನಂತರ ಇನ್ನೋರ್ವ ಸಂಪನ್ಮೂಲ ಅತಿಥಿಯಾಗಿ ಆಗಮಿಸಿರುವ ಎಂ. ಪುರುಷೋತ್ತಮ್ ಹಿರಿಯ ಶ್ರೇಣಿ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾದಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ಯ ಕುರಿತು ಮಾಹಿತಿ ನೀಡಿದರು.

ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ಉದಾಹರಣೆಗಳನ್ನು ನೀಡುವುದರ ಮೂಲಕ ಮಾಹಿತಿ ನೀಡಿದರು. ಹಾಗೆಯೇ ಮಕ್ಕಳ ರಕ್ಷಣಾ ಕಾಯ್ದೆ ಯನ್ನು ವಿವರಿಸುತ್ತಾ ಮಕ್ಕಳ ಸಂದರ್ಭದಲ್ಲಿ ಯಾವುದೇ ಅಪರಾಧಗಳು ಆದಲ್ಲಿ 1098 ಮಕ್ಕಳ ಸಹಾಯವಾಣಿ ಸಂಖ್ಯೆ ಗೆ ಕರೆ ಮಾಡಿ ದೂರು ನೀಡಬಹುದು ಹಾಗೆಯೇ ಲೈಂಗಿಕ ದೌರ್ಜನ್ಯಗಳು ಸಂಭವಿಸಿದಲ್ಲಿ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಪೊಲೀಸ್ ಸ್ಟೇಷನ್ ಗಳಲ್ಲಿ ದೂರು ನೀಡಬಹುದು ಎನ್ನುವುದರ ಕುರಿತು ಮಾಹಿತಿ ನೀಡಿದರು.

ನಂತರ ಸಮುದಾಯದ ಕಾರ್ಯಕರ್ತರಾದ ಶಶಿಕಲಾ ಮಣಿಗೇರಿ ರವರು ಬಾಲಕಾರ್ಮಿಕ ನಿಷೇಧ ಕಾಯ್ದೆ ಯ ಕುರಿತು ಮಾಹಿತಿ ನೀಡಿದರು. 15 ವರ್ಷದ ಒಳಗಿನ ಮಕ್ಕಳು ಬಾಲಕರ್ಮಿಕರಾಗಲು ಕಾರಣ ಮತ್ತು ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ವಿಮಲಾ ಕಳ್ತೂರು ರವರು ನಿರ್ವಹಿಸಿದರು. ಕೊನೆಗೆ ದಿವಾಕರ್ ಕಳ್ತೂರು ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುವುದು ಮೂಲಕ ಇಂದಿನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Ad
Ad
Nk Channel Final 21 09 2023