Ad

ಶಿರ್ವ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಮೃತ್ಯು

Udupi (5)

ಉಡುಪಿ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್‌ ತಗುಲಿ ಕೂಲಿಕಾರ್ಮಿಕರೋರ್ವರು ಮೃತಪಟ್ಟ ಘಟನೆ ಶಿರ್ವ ನಡೀಬೆಟ್ಟು ಎಂಬಲ್ಲಿ ಆ.8ರ ಇಂದು ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ನಡೀಬೆಟ್ಟು ಪನಿಮಾರ್‌ ಮನೆಯ ಕೆಲಸದಾಳು ಸುರೇಶ್‌ ಶೆಟ್ಟಿ(68) ಎಂದು ಗುರುತಿಸಲಾಗಿದೆ. ಇವರು ಕಬ್ಬಿಣದ ಸಲಾಕೆಯಿಂದ ಸೀಯಾಳ ತೆಗೆಯಲು ಹೋಗಿದ್ದರು. ಈ ವೇಳೆ ತೋಟದಲ್ಲಿರುವ ಹೈ ಟೆನ್ಷನ್‌ ವಯರ್‌ ಕಬ್ಬಿಣದ ಸಲಾಕೆಗೆ ತಗಲಿ ಈ ಅವಘಡ ಸಂಭವಿಸಿದೆ. ಈ ಸಂದರ್ಭದಲ್ಲಿ ಮನೆಯ ಮಾಲೀಕ ದೇವಸ್ಥಾನಕ್ಕೆ ಹೋಗಿದ್ದರು ಎನ್ನಲಾಗಿದೆ.

Ad
Ad
Nk Channel Final 21 09 2023