Bengaluru 31°C

ಮಣಿಪಾಲ: ಮೆಸ್ಕಾಂ ಕಚೇರಿಯ ನಾಲ್ಕನೇ ಮಹಡಿಯಿಂದ ಜಿಗಿದು ಚಾಲಕ ಮೃತ್ಯು

ಮೆಸ್ಕಾಂ ಕಚೇರಿಯ ನಾಲ್ಕನೇ ಮಹಡಿಯ ಹಿಂಭಾಗದಿಂದ ವ್ಯಕ್ತಿಯೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.

ಉಡುಪಿ: ಮೆಸ್ಕಾಂ ಕಚೇರಿಯ ನಾಲ್ಕನೇ ಮಹಡಿಯ ಹಿಂಭಾಗದಿಂದ ವ್ಯಕ್ತಿಯೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.


ಪಶ್ಚಿಮ ಬಂಗಾಲದ ರವಿ ಮೊಹಂತ್ (24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಾಂಕ್ರೀಟ್ ಸಾಗಾಟದ ಲಾರಿಯ ಚಾಲಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.


ಘಟನಾ ಸ್ಥಳಕ್ಕೆ ಮಣಿಪಾಲ ಪೋಲಿಸ್ ಠಾಣೆಯ ಎಎಸ್ಐ ನಾಗೇಶ್ ನಾಯ್ಕ್, ತನಿಖಾ ಸಹಾಯಕ ಸುಕುಮಾರ್ ಶೆಟ್ಟಿ ಆಗಮಿಸಿ ಪರಿಶೀಲನೆ ನಡೆಸಿದರು. ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ಶವವನ್ನು ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.


Nk Channel Final 21 09 2023