Bengaluru 22°C
Ad

ಈದ್ ಮಿಲಾದ್ ಪ್ರಯುಕ್ತ ನೇಜಾರಿನಲ್ಲಿ ಹಿಂದೂ ಬಾಂಧವರಿಂದ ತಂಪುಪಾನೀಯ ವಿತರಣೆ

Udupi (3)

ಉಡುಪಿ: ನೇಜಾರು ಜಾಮೀಯ ಮಸೀದಿ ವತಿಯಿಂದ ನಡೆದ ಈದ್ ಮಿಲಾದ್ ಪ್ರಯುಕ್ತ ಹಿಂದೂ ಭಾಂಧವರು ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಕೋಮುಸೌಹಾರ್ದತೆಯನ್ನು ಮೆರೆದರು.
ಮಸೀದಿಯಿಂದ ಹೊರಟ ರ್ಯಾಲಿಯು ಸಂತೆಕಟ್ಟೆ, ಕಲ್ಯಾಣಪುರ ತಲುಪಿ, ಅಲ್ಲಿಂದ ವಾಪಾಸ್ಸು ನಿಡಂಬಳ್ಳಿ ಮಾರ್ಗವಾಗಿ ನೇಜಾರು ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಸುಮಾರು ಐದು ಕಿ.ಮೀ. ಉದ್ದ ಸಾಗಿ ಬಂದ ಮೆರವಣಿಗೆ ಯಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ನೇಜಾರು ಮಸೀದಿ ಅಧ್ಯಕ್ಷ ಅಯ್ಯುಬ್ ಸಾಹೇಬ್, ಖತೀಬ್ ಉಸ್ಮಾನ್ ಮದನಿ, ಮಸ್ನವೀ ವಿದ್ಯಾ ಸಂಸ್ಥೆಗಳ ಮುಖ್ಯ ವ್ಯವಸ್ಥಾಪಕ ಎನ್.ಎ.ನೌಫಲ್ ಮದನಿ ನೇಜಾರು ಮೊದಲಾವರು ಉಪಸ್ಥಿತರಿದ್ದರು.
Screenshot 2024 09 16 175340

ರ್ಯಾಲಿಯಲ್ಲಿ ಸಾಗಿ ಬಂದವರಿಗೆ ನೇಜಾರು ಬಬ್ಬುಸ್ವಾಮಿ ಭಜನಾ ಮಂದಿರ, ನೇಜಾರು ಕ್ರೀಡಾಂಗಣ ಆಟೋ ಚಾಲಕ ಮಾಲಕರ ಸಂಘ, ಗುರುಗಣೇಶ್ ಕಸ್ಟ್ರಕ್ಷನ್‌ನ ಚಂದ್ರಶೇಖರ್ ಮತ್ತು ಪ್ರಕಾಶ್ ಸಹೋದರರು, ಕೇಳಾರ್ಕಳಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದವರು ತಂಪು ಪಾನೀಯ ಹಾಗೂ ಸಿಹಿ ತಿಂಡಿಗಳನ್ನು ವಿತರಿಸಿದರು. ಇವರಿಗೆ ಮಸೀದಿ ವತಿಯಿಂದ ಗೌರವ ಸ್ಮರಣಿಕೆ ನೀಡುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಾಯಿತು

Ad
Ad
Nk Channel Final 21 09 2023