ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದಿನಕರ್ ಹೇರೂರು ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು.
Ad
ಆದಿ ಉಡುಪಿಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ದಿನಕರ ಹೇರೂರು ಅವರು, ನಮ್ಮ ಆಡಳಿತ ಮಂಡಳಿ ಉತ್ತಮ ಕಾರ್ಯಗಳನ್ನು ಮಾಡಲು ಬದ್ಧವಾಗಿದೆ. ಅನೇಕ ಕಡತಗಳು ವಿಲೇವಾರಿಗೆ ಬಾಕಿ ಇದೆ ಎಂಬ ದೂರು ಇದೆ.
Ad
ಇಂದು ಅಧಿಕಾರಿ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಅಧಿಕಾರಿಗಳನ್ನು ಒಮ್ಮತಕ್ಕೆ ತೆಗೆದುಕೊಂಡು ಈ ಸಮಸ್ಯೆಯನ್ನು ಯಾವ ರೀತಿಯಲ್ಲಿ ಬಗೆಹರಿಸಬಹುದು ಎಂಬುವುದನ್ನು ನೋಡ್ತೇವೆ. ಕೆಲವು ಹುದ್ದೆಗಳು ಖಾಲಿ ಇದ್ದು, ನಾಯಕರ ಜೊತೆ ಚರ್ಚಿಸಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅದನ್ನು ಭರ್ತಿ ಮಾಡುವ ಕೆಲಸ ಮಾಡುತ್ತೇನೆ. ಕಡಿತಗಳ ವಿಲೇವಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
Ad
ಪ್ರಾಧಿಕಾರದ ಸದಸ್ಯರಾದ ಜ್ಯೋತಿ ಹೆಬ್ಬಾರ್ ಉಡುಪಿ, ಸತೀಶ್ ಕುಮಾರ್ ಉಡುಪಿ, ಡೇನಿ ವಿಲಯಂ ಲಾರೆನ್ಸ್ ಪಿಂಟೊ, ದಿಲೀಪ್ ಹೆಗ್ಡೆ, ಗಿರೀಶ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.
Ad
Ad