Bengaluru 19°C

ಉಡುಪಿ: ಹಿರಿಯ ಪತ್ರಕರ್ತ ಕಲ್ಮಾಡಿ ಜಯಕರ್ ಸುವರ್ಣ ಇನ್ನಿಲ್ಲ

Jayarm

ಉಡುಪಿ: ಹಿರಿಯ ಪತ್ರಕರ್ತ ಕಲ್ಮಾಡಿ ಜಯಕರ್ ಸುವರ್ಣ ವಿಧಿವಶರಾಗಿದ್ದಾರೆ.  ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ, ಕಲ್ಮಾಡಿ ನಿವಾಸಿ ಜಯಕರ್ ಸುವರ್ಣ ಅವರು ಹೃದಯಾಘಾತದಿಂದ ಸೋಮವಾರ ತಡರಾತ್ರಿ‌ ನಿಧನ ಹೊಂದಿದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ, ಮಲ್ಪೆ ಬಿಲ್ಲವ ಸಂಘ, ಎಸ್.ಕೆ.ಪಿ.ಎ. ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು.  ಸೌತ್ ಕೆನರ ಫೋಟೊಗ್ರಾಫರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷರೂ ಆಗಿದ್ದರು. ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


Nk Channel Final 21 09 2023