Ad

ಪರ್ಕಳದಲ್ಲಿ ಅವೈಜ್ಞಾನಿಕ ಕಾಮಗಾರಿಗೆ ಕುಸಿದ ಕೆರೆ ದಂಡೆ : ಸ್ಥಳೀಯರ ಆಕ್ರೋಶ

ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆ ನಿರ್ಮಾಣ ಹಂತದಲ್ಲಿರುವ ಕೆರೆಯ ದಂಡೆ ಈಗ ಮತ್ತೆ ಕುಸಿದಿದೆ

ಉಡುಪಿ: ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆ ನಿರ್ಮಾಣ ಹಂತದಲ್ಲಿರುವ ಕೆರೆಯ ದಂಡೆ ಈಗ ಮತ್ತೆ ಕುಸಿದಿದೆ. ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಹೀಗಾಗಿದೆ. ಈ ಕೆರೆ ದಂಡೆ ನಿರ್ಮಾಣ ಕಾರ್ಯ ಆರಂಭದಿಂದ 4ನೇ ಬಾರಿಗೆ ಕುಸಿಯುತ್ತಿದೆ. ಸರಕಾರ 2 ಕೋ.ರೂ. ಅನುದಾನವನ್ನು ನೀಡಿದ್ದು, ಅನುದಾನವನ್ನು ನೀರಲ್ಲಿ ಹೋಮ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

Ad
300x250 2

ಕೆರೆ ನಿರ್ಮಾಣಕ್ಕೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ, ಮಣ್ಣು ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡದೆ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಈ ರೀತಿ ದುರಂತ ಸಂಭವಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಣ್ಣನೀರಾವರಿ ಇಲಾಖೆ ವತಿಯಿಂದ ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ತತ್‌ಕ್ಷಣ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Ad
Ad
Nk Channel Final 21 09 2023
Ad