Bengaluru 25°C
Ad

ಉಡುಪಿ: ಅಪಘಾತ ವಲಯಕ್ಕೆ ಮುಕ್ತಿ ನೀಡಿ; ನಾಗರಿಕ ಸಮಿತಿ ಆಗ್ರಹ

ಹಳೆ ಡಯಾನ ವೃತ್ತ, ಕಲ್ಯಾಣ್ ಆಭರಣ‌ ಮಳಿಗೆಯ ಸನಿಹದ ಪಾದಚಾರಿ‌ ರಸ್ತೆಯ ಮೇಲೆ, ಬೃಹತ್ ಗಾತ್ರದ‌ ಕಬ್ಬಿಣದ ಕೊಳವೆ ಹಾಗೂ ಇನ್ನೀತರ ಅದರ ಜೋಡಣಾ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ.

ಉಡುಪಿ: ಹಳೆ ಡಯಾನ ವೃತ್ತ, ಕಲ್ಯಾಣ್ ಆಭರಣ‌ ಮಳಿಗೆಯ ಸನಿಹದ ಪಾದಚಾರಿ‌ ರಸ್ತೆಯ ಮೇಲೆ, ಬೃಹತ್ ಗಾತ್ರದ‌ ಕಬ್ಬಿಣದ ಕೊಳವೆ ಹಾಗೂ ಇನ್ನೀತರ ಅದರ ಜೋಡಣಾ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ.

Ad

ಇವುಗಳು ಸಿಗ್ನಲ್ ಕಂಬಗಳ ನಿರ್ಮಾಣ ಕಾಮಗಾರಿಗೆ ತಂದಿಟ್ಟಿರುವ ಪರಿಕರಗಳೆಂದು ತಿಳಿದುಬಂದಿದೆ. ದಾಸ್ತಾನಿಟ್ಟು ಎರಡು ವರ್ಷಗಳು ಕಳೆದು‌ಹೋಗಿವೆ. ಈ ಸ್ಥಳದಲ್ಲಿ ವಾಹನಗಳು ಸಂಚರಿಸುವಾಗ ತಿರುವು ಪಡೆಯಬೇಕಾಗಿದ್ದು, ಇಲ್ಲಿರುವ ಕೊಳವೆಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ವಾಹನ ಅಪಘಾತಗಳಿಗೂ‌ ಕಾರಣವಾಗುತ್ತಿವೆ.

Ad

ಪಾದಚಾರಿ ರಸ್ತೆಯನ್ನು ಕೊಳವೆಗಳು ಕಬಳಿಸಿರುವುದರಿಂದ ಪಾದಚಾರಿಗಳು ನಡು ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿಯು ಎದುರಾಗಿದೆ. ಆದಷ್ಟು ಬೇಗ ಇಲ್ಲಿರುವ ಕಬ್ಬಿಣ ಪರಿಕರಗಳನ್ನು ನಗರಾಡಳಿತ, ಜಿಲ್ಲಾಡಳಿತವು ವಾರಸುದಾರರ ಮೂಲಕ ವಿಲೇವಾರಿ ಮಾಡಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು,

Ad

ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ. ಸ್ಥಳದಲ್ಲಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರಿಗೆ ಅಭಿನಂದನೆ ಸಲ್ಲಿಸುವ‌ ಕಟೌಟ್ ಇದ್ದು, ಅದರಲ್ಲಿ ಮೋದಿಜೀಯವರು ಕರಮುಗಿದು ನಿಂತಿರುವ‌ ಭಾವಚಿತ್ರವು “ಒಮ್ಮೆ ಇವುಗಳನ್ನು ಸ್ವಚ್ಚಗೊಳಿಸಿ” ಸಂದೇಶ ನೀಡುವಂತೆ ಭಾಸವಾಗುತ್ತಿದ್ದು, ವಸ್ತು ಸ್ಥಿತಿಯನ್ನು ಅಣುಕಿಸುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Ad
Ad
Ad
Nk Channel Final 21 09 2023