Bengaluru 22°C
Ad

ಕಸ್ತೂರಿ ರಂಗನ್ ವರದಿ ಜಾರಿಗೆ ಮುಂಚೆ ಗೊಂದಲ ನಿವಾರಿಸಿ: ಮಂಜುನಾಥ್ ಶೆಟ್ಟಿ

ಕಸ್ತೂರಿ ರಂಗನ್ ವರದಿ ಜಾರಿಗೆ ಮುಂಚೆ ಜನರ ವಿಶ್ವಾಸ ಪಡೆದು ಗೊಂದಲ ನಿವಾರಿಸಬೇಕು ಎಂದು ಹಳ್ಳಿಹೊಳೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಹೇಳಿದರು.

ಉಡುಪಿ: ಕಸ್ತೂರಿ ರಂಗನ್ ವರದಿ ಜಾರಿಗೆ ಮುಂಚೆ ಜನರ ವಿಶ್ವಾಸ ಪಡೆದು ಗೊಂದಲ ನಿವಾರಿಸಬೇಕು ಎಂದು ಹಳ್ಳಿಹೊಳೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಹೇಳಿದರು.

ಈ ಕುರಿತು ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದ ಸುಮಾರು 4,358 ಎಕರೆ ಭೂಮಿ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಕೇಂದ್ರ ಪರಿಸರ, ಅರಣ್ಯ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಪ್ರಕಾರ ಹಳ್ಳಿಹೊಳೆ ಗ್ರಾಮದ 7,240.50 ಎಕರೆ ಭೂಮಿಯನ್ನು ಪರಿಸರ ಸೂಕ್ಷ್ಮ ಪ್ರದೇಶದಿಂದ ( ಜನವಸತಿ ಪ್ರದೇಶ) ಮ್ಯಾನುವಲ್ ಸರ್ವೇ ಮಾಡಿ ಕೈ ಬಿಡುವ ಕುರಿತು ಸೆ.25 ರಂದು ನಡೆದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಯೋಜನೆ ಜಾರಿಗೂ ಮುನ್ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರಲ್ಲಿ ಇರುವ ಗೊಂದಲವನ್ನು ಪರಿಹರಿಸಬೇಕು ಎಂದವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಪ್ರದೀಪ್ ಕೊಠ್ಠಾರಿ, ಪ್ರಮುಖರಾದ ಪ್ರಭಾಕರ್ ನಾಯ್ಕ್, ಜಯರಾಮ್ ಪೂಜಾರಿ, ಸುರೇಶ್ ಪೂಜಾರಿ, ಸುಜಾತ ಭೋವಿ, ನೇತ್ರಾವತಿ ಉಪಸ್ಥಿತರಿದ್ದರು.

 

Ad
Ad
Nk Channel Final 21 09 2023