Bengaluru 24°C
Ad

ಧರ್ಮೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

ಕಾಪು ತಾಲೂಕಿನ ಶಿರ್ವ ಧರ್ಮೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಉಡುಪಿ: ಕಾಪು ತಾಲೂಕಿನ ಶಿರ್ವ ಧರ್ಮೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

Ad

ಮಕ್ಕಳಿಗೆ ಮಾತೃ ಸಂಗಮ ಅಡಪಾಡಿ ಮತ್ತು ಅಂಗನವಾಡಿ ಶಿಕ್ಷಕಿ ನೀಷ್ಮಾ, ಆಶಾ ಕಾರ್ಯಕರ್ತೆ ಸುಮತಿ ಅವರು ಕಲಿಕಾ ಸಾಮಗ್ರಿ ಹಾಗೂ ಮಮತಾ ರಮೇಶ್ ಶೆಟ್ಟಿ ದಂಪತಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ಟೀನಾ ಐವನ್‌ ಡಿಸೋಜಾ ಅವರು ಗ್ಯಾಸ್‌ ಸ್ಟವ್‌ ಉಡುಗೊರೆಯಾಗಿ ನೀಡಿದರು.

Ad

ಈ ಸಂದರ್ಭದಲ್ಲಿ ಇತ್ತೀಚಿಗೆ ನಿವೃತ್ತರಾದ ಅಂಗನವಾಡಿ ಶಿಕ್ಷಕಿ ಪುಷ್ಪ ಅವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ಶೇಖರ್‌ ಮತ್ತು ವಿನಯ ದಂಪತಿಗಳ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು.

Ad

ಇಂದಿರಾ ಪ್ರಕಾಶ್, ವಿನಯ ಶೇಖರ್ ಮತ್ತು ಗ್ರಾಮಸ್ಥರು, ಸೌಮ್ಯ ಗೋಪಾಲ ಮತ್ತು ಸ್ತ್ರೀ ಶಕ್ತಿ ಗಂಪುಗಳಿಂದ ನೆರೆದವರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಯಿತು. ಸಂದೀಪ್‌ ಪೂಜಾರಿ, ಸುರೇಶ್‌ ನಾಯಕ್‌, ರವಿಶಂಕರ್‌, ನಳಿನಿ ಪೂಜಾರ್ತಿ ಮತ್ತಿತರರು ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023