ಉಡುಪಿ: ಮೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು ಕಣ್ಣೀರು ಹಾಕಿ ಬೀಳ್ಕೊಟ್ಟ ಘಟನೆ ಬೈಂದೂರು ತಾಲೂಕಿನ ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ದೈಹಿಕ ಶಿಕ್ಷಕ ಹರ್ಕೂರು ಪ್ರವೀಣ್ ಕುಮಾರ್ ಶೆಟ್ಟಿ ವರ್ಗಾವಣೆಗೆ ಮಕ್ಕಳು ಕಣ್ಣೀರು ಹಾಕಿದ್ದಾರೆ. ಪ್ರವೀಣ್ ಅವರು ಕಳೆದ ಒಂದು ದಶಕದಿಂದ ಆಲೂರು ಪ್ರೌಢಶಾಲೆಯಲ್ಲಿ ದೈಹಿಕಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕ್ರೀಡೆಯಲ್ಲಿ ಮಕ್ಕಳನ್ನು ಹುರಿದುಂಬಿಸುತ್ತಾ ಹಲವು ಪ್ರಶಸ್ತಿ ಬಾಚಿಕೊಳ್ಳುವಂತೆ ಮಾಡಿದ್ದರು. ಅವರ ಹೋರಾಟಕ್ಕೆ ಗ್ರಾಮಸ್ಥರು ತಲೆದೂಗಿದ್ದರು, ಸಹಕರಿಸಿದ್ದರು.
ಶಾಲಾ ಮಕ್ಕಳಿಗೂ ಈ ದೈಹಿಕ ಶಿಕ್ಷಕ ಎಲ್ಲರಿಕ್ಕಿಂತ ಅಚ್ಚಮೆಚ್ಚು. ಎಲ್ಲಾ ವಿದ್ಯಾರ್ಥಿಗಳಿಗೂ ಕ್ರೀಡೆಯ ಕುರಿತು ನಿರಂತರ ಕೋಚಿಂಗ್ ನೀಡುತ್ತಿದ್ದರು. ಸರಕಾರಿ ನಿಯಮದಂತೆ ಕುಂದಾಪುರ ತಾಲೂಕು ಹೈಕಾಡಿ ಶಾಲೆಗೆ ವರ್ಗಾವಣೆಯಾಗಿದ್ದಾರೆ. ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಣ್ಣೀರು ಹಾಕಿ ತಮ್ಮ ಮೆಚ್ಚಿನ ಶಿಕ್ಷಕನಿಗೆ ವಿದಾಯ ಕೋರಿದರು.
Ad