ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದೆ. ಬೈಂದೂರು ತಾಲೂಕಿನಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಸಕ್ರಿಯಗೊಂಡಿದೆ. ಬೈಂದೂರು ತಾಲೂಕಿನ ನಾಗೂರಿನ ಮನೆಯೊಂದರ ಅಂಗಳದಲ್ಲಿ ಚಡ್ಡಿಗ್ಯಾಂಗ್ ಸದಸ್ಯನೋರ್ವ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಖತರ್ನಾಕ್ ಚಡ್ಡಿ ಗ್ಯಾಂಗ್ ನ ಸದಸ್ಯ ಬನಿಯಾನ್, ಚಡ್ಡಿ ಹಾಕಿಕೊಂಡು ಕೈಯಲ್ಲಿ ಚಪ್ಪಲಿ ಹಿಡಿದು ರಾತ್ರಿ ಸಂಚಾರ ಮಾಡುತ್ತಿರುವ ದೃಶ್ಯ ಕಂಡುಬಂದಿದ್ದು, ಮನೆಯ ಸಿಸಿ ಕ್ಯಾಮೆರಾವನ್ನು ನೋಡುತಿದ್ದಂತೆ ಆತ ಅಲ್ಲಿಂದ ಓಡಿಹೋಗಿದ್ದಾನೆ. ಈ ಘಟನೆಯಿಂದ ಸ್ಥಳೀಯರಲ್ಲಿ ಚಡ್ಡಿ ಗ್ಯಾಂಗ್ ಆತಂಕ ಶುರುವಾಗಿದೆ. ಚಡ್ಡಿ ಗ್ಯಾಂಗ್ ಪತ್ತೆಗಾಗಿ ಬೈಂದೂರು ಪೊಲೀಸರು ಬಲೆ ಬೀಸಿದ್ದಾರೆ.
Ad