Bengaluru 23°C
Ad

ಬೈಂದೂರು: ಟ್ರಾನ್ಸ್‌ಫಾರ್ಮರ್ ರಿಪೇರಿ ವೇಳೆ ವಿದ್ಯುತ್ ತಗುಲಿ ಲೈನ್‌ಮ್ಯಾನ್ ಸಾವು

ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಬೈಂದೂರಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಉಡುಪಿ: ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಬೈಂದೂರಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಸಲೀಂ (38) ಮೃತಪಟ್ಟ ದುರ್ದೈವಿ ಎಂಬ ಮಾಹಿತಿ ತಿಳಿದು ಬಂದಿದೆ. ಇವರು ಮೂಲತಃ ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿದ್ದು ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೈಂದೂರು ಪರಿಸರದ ಜನಸ್ನೇಹಿ ಲೈನ್‌ಮ್ಯಾನ್ ಆಗಿರುವ ಇವರು ಅಕಾಲಿಕ ನಿಧನ ಆಘಾತ ಉಂಟು ಮಾಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad