ಉಡುಪಿ: ಚೇರ್ಕಾಡಿ ಗ್ರಾಮದಲ್ಲಿ ಮಹಿಳೆ, ಮಕ್ಕಳಿಗೆ ಕಿರುಕುಳ ನೀಡಿದ್ದ ಅರೋಪ ಕೇಳಿಬಂದಿದ್ದು, ಅಪರಿಚಿತ ವ್ಯಕ್ತಿಯಿಂದ ಕಿರುಕುಳವಾಗುತ್ತಿದೆ ಎಂದು ದೂರಲಾಗಿತ್ತು. ಶನಿವಾರ ಸಂಜೆ 7:45 ಕ್ಕೆ ಈ ಬಗ್ಗೆ ಮಾಹಿತಿ ಬಂದಿತ್ತು. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಮಹಿಳೆಗೆ ತೊಂದರೆ ಕೊಟ್ಟಿರುವುದು ಕಂಡುಬಂದಿದೆ. ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ದೂರುದಾರ ಮಹಿಳೆ ತಮ್ಮನ ಜೊತೆ ಠಾಣೆಗೆ ಬಂದು ಕಂಪ್ಲೇಂಟ್ ಕೊಟ್ಟಿದ್ದಾರೆ. ನನಗೆ ಕಿರುಕುಳ ನೀಡಿದ್ದಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಲಾಕ್ ಅಪ್ ನಲ್ಲಿ ಇಡಲಾಗಿತ್ತು. ಸೆಂಟ್ರಿ ಡ್ಯೂಟಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಬೆಳೆಗ್ಗೆ 3:45 ಕ್ಕೆ ನೋಡಿದ್ದಾರೆ. ಗೋಡೆಗೆ ತಲೆತಾಗಿಸಿ ಕುಸಿದು ಬಿದ್ದ ರೀತಿ ಕಂಡು ಬಂದಿದ್ದಾರೆ.
ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಲಾಗಿದೆ. ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಗೆ ಬರುವಾಗಲೇ ಆರೋಪಿ ಮೃತನಾಗಿದ್ದ 45 ವರ್ಷ ಪ್ರಾಯದ ಬಿಜು ಮೋಹನ್ ಆರೋಪಿ ಎಂದು ತಿಳಿದುಬಂದಿದೆ.
ಕೂಲಿ ಕೆಲಸದ ಸಲುವಾಗಿ ಆತ ಬ್ರಹ್ಮಾವರಕ್ಕೆ ಬಂದಿದ್ದ. ಮೃತನ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರ ದೂರಿನ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಲಾಕಪ್ ಡೆತ್ ಪ್ರಕರಣವಾದ ಕಾರಣ ಸಿಐಡಿ ತನಿಖೆ ನಡೆಸಲಿದೆ ಕಾನೂನಾತ್ಮಕವಾಗಿ ಶವದ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಉಡುಪಿ ಎಸ್ಪಿ ಡಾ ಅರುಣ್ ಕುಮಾರ್ ಹೇಳಿಕೆ ನೀಡಿದ್ದಾರೆ.