ಉಡುಪಿ: ಶಾಂಭವಿ ಹೊಳೆಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಇರ್ವತ್ತೂರಿನಲ್ಲಿ ಸಂಭವಿಸಿದೆ.
ಚರಣ್ ರಾಜ್ (15) ಮೃತ ಬಾಲಕ. ಈತ ಸಾಣೂರು ಹೈಸ್ಕೂಲಿನಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸ್ನೇಹಿತರ ಜೊತೆ ಇರ್ವತ್ತೂರು ಗ್ರಾಮದ ಗೊಲ್ಲಿಂಡಿ ಎಂಬಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಗೆ ಬಿದ್ದಿದ್ದಾನೆ.
ತಕ್ಷಣವೇ ಸಾರ್ವಜನಿಕರು ನೀರಿನಿಂದ ಎತ್ತಿ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ ಚರಣ್ ರಾಜ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad