ಉಡುಪಿ : ಕೊಲ್ಕತ್ತಾ ಮೆಡಿಕಲ್ ಕಾಲೇಜು ತರಬೇತಿ ನಿರತ ವೈದ್ಯೆ ಅತ್ಯಾಚಾರ ಹತ್ಯೆ ಹಿನ್ನಲೆ ಕುಂದಾಪುರ ತಾಲೂಕಿನ ಸರಕಾರಿ ತಾಲೂಕು ಆಸ್ಪತ್ರೆ ಓ ಪಿ ಡಿ ಬಂದ್ ಮಾಡಲಾಗಿದೆ. ಉಡುಪಿ ಜಿಲ್ಲೆಯ ಐ ಎಂ ಎ ಸಂಘಟನೆ ಕರೆ ಕೊಟ್ಟಿದ್ದು ಬಂದ್ ಗೆ ಬೆಂಬಲ ನೀಡಲಾಗಿದೆ. ಜಿಲ್ಲೆಯ ಬಹುತೇಕ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓ ಪಿ ಡಿ ಬಂದ್ ಮಾಡಲಾಗಿದೆ.
ತುರ್ತು ಸೇವೆಗಳನ್ನ ಹೊರತುಪಡಿಸಿ ಉಳಿದ ಸೇವೆಗಳಿಗೆ ಸ್ಪಂದಿಸದೆ ಇರಲು ನಿರ್ಧಾರಿಸಲಾಗಿದೆ. ಇಂದು ಮುಂಜಾನೆ ಆರು ಗಂಟೆಯಿಂದ ನಾಳೆ ಮುಂಜಾನೆ ಆರು ಗಂಟೆಯವರೆಗೆ ಬಂದ್ ಇರಲಿದೆ. ವೈದ್ಯ ಸಮೂಹಕ್ಕೆ ಆದ ಅನ್ಯಾಯದ ವಿರುದ್ಧ ವೈದ್ಯರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯ ಜೊತೆಗೆ ಸರಕಾರಿ ಆಸ್ಪತ್ರೆಯ ಓ ಪಿ ಡಿ ಕೂಡ ಬಂದ್ ಮಾಡಲಾಗಿದೆ.