Bengaluru 22°C
Ad

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ನಡೆದಿದೆ.

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ನಡೆದಿದೆ.

Ad

ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಮಹಮ್ಮದ್‌ ಸಪಾಝ್‌ (29)ಹಾಗೂ ಪುತ್ತೂರು ಗ್ರಾಮದ ಸಂತೆಕಟ್ಟೆಯ ಚರಣ್‌ ಯು ಭಂಡಾರಿ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 53,300 ಸಾವಿರ ಮೌಲ್ಯದ 740 ಗ್ರಾಂ ತೂಕ ಗಾಂಜಾ, KA51AD3933ನೇ HONDA ಕಂಪೆನಿಯ Activa ಸ್ಕೂಟರ್ ಅಂದಾಜು ಮೌಲ್ಯ ರೂ, 25,000, ನಗದು ರೂ, 2170 ಹಾಗೂ ಎರಡು ಮೊಬೈಲ್ ಪೋನ್ ಸಹಿತ ಒಟ್ಟು 98,770 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Ad

ಗ (1)

ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್‌ ಮತ್ತು ಪ್ರೊಬೆಶನರಿ ಡಿ.ವೈ.ಎಸ್‌.ಪಿ. ಗೀತಾ ಪಾಟೀಲ್‌ ಅವರ ನೇತೃತ್ವದಲ್ಲಿ ಉಪನಿರೀಕ್ಷಕರಾದ ಪವನ್‌ ನಾಯಕ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್‌, ಪ್ರವೀಣ್‌, ರಾಜೇಶ್‌, ವೆಂಕಟೇಶ್‌, ನಿಲೇಶ್‌, ರಾಘವೇಂದ್ರ, ಪ್ರಶಾಂತ್ ಮತ್ತು ಚರಣ್‌ರಾಜ್‌ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

Ad
Ad
Ad
Nk Channel Final 21 09 2023