Bengaluru 25°C
Ad

ಕಾರ್ಕಳ ಪರಶುರಾಮ ಮೂರ್ತಿ ರಚಿಸಿದ ಕಲಾವಿದ ಕೃಷ್ಣ ನಾಯ್ಕ್ ಬಂಧನ ವಿಚಾರ: ಉದಯ ಕುಮಾರ್ ಶೆಟ್ಟಿ ಹೇಳಿಕೆ

ಕಾರ್ಕಳ ಪರಶುರಾಮ ಮೂರ್ತಿ ರಚಿಸಿದ ಕಲಾವಿದ ಕೃಷ್ಣ ನಾಯ್ಕ್ ಬಂಧನ ವಿಚಾರವಾಗಿ ಉಡುಪಿಯಲ್ಲಿ ಕಾಂಗ್ರೆಸ್ ನಾಯಕ ಉದಯ ಕುಮಾರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಉಡುಪಿ: ಕಾರ್ಕಳ ಪರಶುರಾಮ ಮೂರ್ತಿ ರಚಿಸಿದ ಕಲಾವಿದ ಕೃಷ್ಣ ನಾಯ್ಕ್ ಬಂಧನ ವಿಚಾರವಾಗಿ ಉಡುಪಿಯಲ್ಲಿ ಕಾಂಗ್ರೆಸ್ ನಾಯಕ ಉದಯ ಕುಮಾರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಬಡಪಾಯಿ ಕಲಾವಿದ ಕೃಷ್ಣನಾಯ್ಕ್ ನನ್ನು ಬಂಧಿಸಲಾಗಿದೆ. ಕಲಾವಿದ ಜೈಲಿನಲ್ಲಿದ್ದಾನೆ- ಮನೆಯಲ್ಲಿ ಇರಬೇಕಾದವರು ವಿಧಾನಸಭೆಯಲ್ಲಿದ್ದಾರೆ. ಒಂದೂಕಾಲು ಕೋಟಿ ಹಣ ಟೆಂಡರ್ ಆಗುವ ಮೊದಲೇ ಬಿಡುಗಡೆಯಾಗಿದೆ.

Ad

ಕಲಾವಿದನಿಂದ ಕಂಚು ಖರೀದಿಯಾದ ಬಗ್ಗೆ ಯಾವುದೇ ದಾಖಲೆಗಳಿಲ್ಲ, ಕಣ್ಮರೆಯಾದ ಅರ್ಧ ಪರಶುರಾಮನ ಅರ್ಧ ಮೂರ್ತಿ ಎಲ್ಲಿದೆ?. ಸುಟ್ಟು ಹಾಕಿದ್ದಾರೋ, ಹೂತಿಟ್ಟಿದ್ದಾರೋ ಪೊಲೀಸರು ಪತ್ತೆ ಮಾಡಬೇಕು. ಮೂರ್ತಿ ಕಣ್ಮರೆಯ ಹಿಂದಿನ ಸತ್ಯ ಹೊರಗೆ ಬರಬೇಕು. ಬೃಹತ್ ಹಗರಣವಾದರೂ ಸುನೀಲ್ ಕುಮಾರ್ ಕ್ಷಮೆ ಕೇಳುತ್ತಿಲ್ಲ.ಸುನೀಲ್ ಕುಮಾರ್ ಬಂದ ಮೇಲೆ ಕಾರ್ಕಳ ಉದಯ ಆದದ್ದಲ್ಲ.

Ad

ಕಾರ್ಕಳಕ್ಕೆ ಇತಿಹಾಸವಿದೆ, ಸಾಧಕರು ಬಹಳ ಜನ ಇದ್ದಾರೆ. ಶಾಸಕ ಸುನೀಲ್ ಕುಮಾರ್ ಜನರ ಮುಂದೆ ಬಂದು ಥೀಂ ಪಾರ್ಕ್ ಬಗ್ಗೆ ಮಾತನಾಡಬೇಕು ಸ್ಪಷ್ಟನೆ ಕೊಡಬೇಕು. ನಿರ್ಮಿತಿ ಕೇಂದ್ರದ ಇಂಜಿನಿಯರ್, ಅಧಿಕಾರಿಗಳು, ಶಾಸಕರನ್ನು ಬಂಧಿಸುವ ಪ್ರಮೇಯ ಬರಬಹುದು. ಕೃಷ್ಣ ನಾಯ್ಕ್, ಕಸ್ಟಡಿಯಲ್ಲಿ ಯಾವ ಮಾಹಿತಿ ಹೊರಹಾಕುತ್ತಾನೋ ಕುತೂಹಲ ಇದೆ.

Ad

ಸಿಒಡಿ ತನಿಖೆಗಿದ್ದ ಸ್ಟೇ ತೆರವಾಗಿದೆ. ಸಿಐಡಿ ತನಿಖೆಯಲ್ಲಿ ಎಲ್ಲಾ ಸತ್ಯ ಮುನ್ನೆಲೆಗೆ ಬರಬಹುದು. ಸಮಗ್ರ ತನಿಖೆ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಸರಕಾರದ 33 ಇಲಾಖೆಗಳನ್ನು ಸ್ವಂತ ರಾಜಕೀಯ ಮಾಡಲು ಬಳಸಿದ್ದಾರೆ. ಬಂಧಿತ ಕಲಾವಿದನಿಂದ ಕೃಷ್ಣನಾಯ್ಕ್ ಗೆ ಮಂಜೂರಾದ ಹಣ ವಾಪಾಸ್ ಪಡೆಯಬೇಕು. ಹಣ ಕಲಾವಿದ ಕೃಷ್ಣನಾಯ್ಕ್ ಅಕೌಂಟ್ ಗೆ ಹೋಗಿಲ್ಲ, ಎಲ್ಲಿ ವರ್ಗಾವಣೆಯಾಗಿದೆ ತನಿಖೆಯಾಗಲಿ ಶಾಸಕರ ಅಹಂಕಾರ ಮತ್ತು ಅಹಂ ನ ಅಂತ್ಯ ಆಗಬೇಕು ಎಂದರು.

Ad
Ad
Ad
Nk Channel Final 21 09 2023