Bengaluru 27°C

ಜನಸಾಮಾನ್ಯರಿಗೆ ಅನುಕೂಲವಾಗುವ ಅದ್ಭುತ ಬಜೆಟ್: ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್

ಸಾಮಾನ್ಯ ಜನರಿಗೆ ಅನುಕೂಲವಾಗುವ ಬಜೆಟ್ ಅನ್ನು ಈ ಬಾರಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ತಿಳಿಸಿದ್ದಾರೆ.

ಉಡುಪಿ: ಸಾಮಾನ್ಯ ಜನರಿಗೆ ಅನುಕೂಲವಾಗುವ ಬಜೆಟ್ ಅನ್ನು ಈ ಬಾರಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ತಿಳಿಸಿದ್ದಾರೆ.


ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರಿನ ಯೋಜನೆ ಶೇ. 80ರಷ್ಟು ಕಾರ್ಯಗತವಾಗಿದ್ದು, ಈ ವರ್ಷ ಅದನ್ನು ಶೇ. 100ಕ್ಕೆ ತಲುಪಿಸಲಾಗುವುದು.


ಜನರ ಆರೋಗ್ಯ ವರ್ಧನೆಗೆ ಹಣ್ಣು ಹಾಗು ಶುದ್ದ ಸಾವಯವ ತರಕಾರಿ ಉಪಯೋಗಕ್ಕೆ ಪ್ರೋತ್ಸಾಹಿಸಲು ರಾಜ್ಯ ಸರಕಾರದೊಂದಿಗೆ ಬೆಳೆಯಲು ಮತ್ತು ಬಳಸಲು ಪ್ರೋತ್ಸಾಹಿಸುವುದು. ಜಿಲ್ಲೆಗೊಂದು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಿಸುವುದು, ಪ್ರಮುಖ ಔಷಧಿಗಳ ಮೇಲಿನ ತೆರಿಗೆ ವಿನಾಯಿತಿಯೂ ಜನಸಾಮಾನ್ಯರಿಗೆ ಅನೂಕಲವಾಗಲಿದೆ ಎಂದರು.


12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ನಿಜಕ್ಕೂ ಮಧ್ಯಮ ವರ್ಗಕ್ಕೆ ಬಹುದೊಡ್ಡ ಕೊಡುಗೆ ಎಂದು ಪ್ರಶಂಸಿದ ಅವರು, ಜೀವ ರಕ್ಷಕ ಔಷಧಿಗಳ ಮೇಲೆ ತೆರಿಗೆ ವಿನಾಯಿತಿ, ಮೀನುಗಾರಿಕಾ ರಫ್ತು ಉದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು, ಕರಾವಳಿ ಬಂದರುಗಳ ಅಭಿವೃದ್ಧಿಗೆ ನೆರವು, ಕಿಸಾನ್ ಕಾರ್ಡ್ ಮೊತ್ತವನ್ನು 3 ರಿಂದ 5 ಲಕ್ಷಕ್ಕೆ ಏರಿಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಉದ್ಯಮ ಸ್ಥಾಪನೆಗೆ ಎರಡು ಕೋಟಿ ವರೆಗಿನ ಸಾಲ ಸೌಲಭ್ಯದ ಘೋಷಿಸಲಾಗಿದೆ.


ಒಂದುವರೆ ಲಕ್ಷ ಭಾರತೀಯ ಅಂಚೆ ಬ್ಯಾಂಕುಗಳ ರಚನೆ, ರೈತಾಪಿ ವರ್ಗದ ವಿವಿಧ ಬೆಳೆಗಳಿಗೆ ನೀಡುವ ಆರ್ಥಿಕ ಸಹಾಯ, ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ವಿತರಣೆಗೆ ಕ್ರಮ, ಸರಕಾರಿ ಶಾಲೆಗಳಿಗೆ ಇಂಟರ್ನೆಟ್ ಸೌಲಭ್ಯಕ್ಕೆ ಕ್ರಮ, ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಂಜೂರಾತಿಗೆ ಕ್ರಮ, ಪ್ರವಾಸೋದ್ಯಮದ ದೃಷ್ಟಿಯಿಂದ ಕಾನೂನು ಬದ್ಧ ಹೋಂ ಸ್ಟೇಗಳಿಗೆ ಮುದ್ರಾ ಸಾಲ ವಿಸ್ತರಣೆ ಮುಂತಾದ ಅನೇಕ ಯೋಜನೆಗಳನ್ನು ನೀಡಿರುವುದು ಸಂತಸ ನೀಡಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀಶ ನಾಯಕ್ ಪೆರ್ಣಂಕಿಲ, ವಿಜಯ್ ಕುಮಾರ್ ಉದ್ಯಾವರ, ಶಿವಕುಮಾರ್ ಅಂಬಲಪಾಡಿ, ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು.


Nk Channel Final 21 09 2023