Bengaluru 22°C

ಕಾರು, ಬೈಕ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರು ದುರ್ಮರಣ

ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಹಿರೀಕಾಟಿ ಗ್ರಾಮದ ಗೆಟ್ ಬಳಿ ಕಾರು ಮತ್ತು ಬೈಕ್ ಗಳ ನಡುವೆ ಬೀಕರ ಅಪಘಾತ ನಡೆದು ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ನಂಜನಗೂಡು: ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಹಿರೀಕಾಟಿ ಗ್ರಾಮದ ಗೆಟ್ ಬಳಿ ಕಾರು ಮತ್ತು ಬೈಕ್ ಗಳ ನಡುವೆ ಭೀಕರ ಅಪಘಾತ ನಡೆದು ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.


ನಂಜನಗೂಡಿನ ತಾಲ್ಲೂಕಿನ ಕುಡ್ಲಾಪುರ ಗ್ರಾಮದ ಶಶಿಧ‌ರ್ (40), ಶಾಲಿನಿ(35) ಮತ್ತು ತಾಯಿ ಭಾಗ್ಯಮ್ಮ(55) ಮೃತಪಟ್ಟಿರುವವರು ಎಂದು ತಿಳಿದು ಬಂದಿದೆ. ಚಿಕ್ಕದೇವಮ್ಮನ ಬೆಟ್ಟದಿಂದ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಸ್ವ ಗ್ರಾಮ ಕೂಡ್ಲಾಪುರ ಗ್ರಾಮಕ್ಕೆ ತೆರಳುವಾಗ ಹಿರೀಕಾಟಿ ಗೇಟಿನಿಂದ ಮುಂದೆ ಅಪಘಾತವಾಗಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ.


ಮತ್ತೋರ್ವ ವ್ಯಕ್ತಿ ಗಾಯವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.


Nk Channel Final 21 09 2023