ಉಡುಪಿ: ಹೊಸ ಟಿಶರ್ಟ್, ಚಡ್ಡಿ ಧರಿಸಿರುವ ಬೀದಿ ಶ್ವಾನವೊಂದು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುವುದು ಗಮನಸೆಳೆಯಿತು. ಒಂದಿಷ್ಟು ಜನರು ಫೋಟೋ ಕ್ಲಿಕ್ಕಿಸಿದರು. ಕೆಲವರಂತೂ ಮುಸಿ ಮುಸಿ ನಕ್ಕರು.
Ad
ನಿಜ ಸಂಗತಿ ತಿಳಿದುಬಂದಾಗ ಎಲ್ಲರೂ ವಿಸ್ಮಿತರಾದರು. ಪ್ರಾಣಿಪ್ರಿಯ ನಿತ್ಯಾನಂದ ಒಳಕಾಡು ಅವರು ನಾಯಿಗೆ ಸ್ನಾನಮಾಡಿಸಿ ಹೊಸಬಟ್ಟೆ ಉಡಿಸಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ್ದರು.
Ad
ಈ ಬೀದಿನಾಯಿ ಕಳೆದ ಎರಡು ವರ್ಷಗಳ ಹಿಂದೆ ವಾಹನ ಅಪಘಾತದಿಂದ ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿತ್ತು. ಒಳಕಾಡುವರು ರಕ್ಷಿಸಿ ಚಿಕಿತ್ಸೆಗೆ ಒಳಪಡಿಸಿದ್ದರು. ಅಲ್ಲಿಂದ ಆ ನಾಯಿಗೆ ಆಹಾರ ನೀಡಿ ಉಪಚರಿಸುತ್ತಿದ್ದರು. ನಾಯಿ ಮಾರುಥಿವೀಥಿಕಾದಲ್ಲಿಯೇ ನೆಲೆಕಂಡಿತ್ತು
Ad
Ad