ಉಡುಪಿ: ಇಂದ್ರಾಳಿಯ ರೈಲ್ವೆ ಸೇತುವೆ ಬಳಿ ರೈಲ್ವೆ ಹಳಿಯ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಗುರುವಾರ ರಾತ್ರಿ ಕಂಡುಬಂದಿದೆ. ವ್ಯಕ್ತಿಯು ಚಲಿಸುತ್ತಿರುವ ರೈಲಿಗೆ ಅಡ್ಡಬಂದು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
Ad
ಟಾರ್ಚ್ ಬೆಳಕಿನ ಸಹಕಾರದಿಂದ ಛಿದ್ರ ದೇಹವನ್ನು ಒಟ್ಟುಗೂಡಿಸಿ, ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು. ಮೃತ ವ್ಯಕ್ತಿಯನ್ನು ಮೂಡಸಗ್ರಿಯ ನೀಲಾದರ ನಾಯ್ಕ್ ಎಂದು ಶಂಕಿಸಲಾಗಿದೆ. ಈ ದುರ್ಘಟನೆಗೆ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಿದೆ.
Ad
Ad