Bengaluru 27°C
Ad

ಸಾವಿನಲ್ಲೂ ಒಂದಾದ ದಂಪತಿ; ಒಂದೇ ದಿನ ಅಂತರದಲ್ಲಿ ಪತಿ, ಪತ್ನಿ ಸಾವು

ಒಂದು ದಿನದ ಅಂತರದಲ್ಲಿ ದಂಪತಿ ನಿಧನ ಹೊಂದಿ ಸಾವಿನಲ್ಲೂ ಒಂದಾದ ಘಟನೆ ಉದ್ಯಾವರದಲ್ಲಿ ಸಂಭವಿಸಿದೆ.

ಉಡುಪಿ: ಒಂದು ದಿನದ ಅಂತರದಲ್ಲಿ ದಂಪತಿ ನಿಧನ ಹೊಂದಿ ಸಾವಿನಲ್ಲೂ ಒಂದಾದ ಘಟನೆ ಉದ್ಯಾವರದಲ್ಲಿ ಸಂಭವಿಸಿದೆ. ಕಾರ್ಕಳ ತಾಲೂಕು ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್ ರೆಬೆಲ್ಲೋ (56)ಅವರು ನವೆಂಬರ್ 28ರಂದು ನಿಧನ ಹೊಂದಿದ್ದರು.

Ad

ಇವರ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್ ಡೇಸಾ (62)ಅವರು ಅಸೌಖ್ಯದಿಂದ ನವೆಂಬರ್ 29ರಂದು ನಿಧನ ಹೊಂದಿದ್ದಾರೆ. ಉದ್ಯಾವರ ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯದ ಪಾಲನ ಮಂಡಳಿಯಲ್ಲಿ ಮೂರು ಬಾರಿ ಉಪಾಧ್ಯಕ್ಷ, ವಾರ್ಡ್‌ ನ ಗುರಿಕಾರರಾಗಿದ್ದ ಮೃತರು ಉದ್ಯಾವರ ಬೋಳಾರಗುಡ್ಡೆ ಕಲಾಯಿಬೈಲ್ ನಿವಾಸಿ.

Ad

ಉದ್ಯಾವರ ಮಂಡಲ ಪಂಚಾಯತ್ ಸದಸ್ಯರಾಗಿ, ಒಂದು ಅವಧಿಯಲ್ಲಿ ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷರಾಗಿ ಸುದೀರ್ಘ ಸುಮಾರು ಮೂರು ದಶಕಗಳ ಕಾಲ ಗ್ರಾ.ಪಂ. ಸದಸ್ಯರಾಗಿ ಸಮಾಜಮುಖೀ ಸೇವೆಯನ್ನು ಸಲ್ಲಿಸಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ

Ad
Ad
Ad
Nk Channel Final 21 09 2023